Breakingಕ್ರೈಮ್ /ಕೋರ್ಟ್

ಪತ್ನಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿರಾಯ! husband kill wife in koppal

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕಾ ಅಂತಾರೆ. ಆದ್ರೆ ವಿದ್ಯಾಕಾಶಿ ಧಾರವಾಡದಲ್ಲಿ ಪತಿಯೋರ್ವ ಪತ್ನಿ ಮಲಗ್ಗಿದಾಗಲೇ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಪತಿ ಆತ್ಮಹತ್ಯೆಗೆ ಯತ್ನ ಮಾಡುತಿದ್ದಾನೆ ಎಂದು ತಿಳಿದ ಪತ್ನಿ, ಆತನ ಜೊತೆಯಲ್ಲೇ ಬಂದು ಮಲಗಿದ್ದಳು. ಆದರೆ ಆ ಮಹಿಳೆಯ ದುರಾದೃಷ್ಟ ಏನೋ, ಪತಿ ಆಕೆಯನ್ನೇ ಕೊಲೆ ಮಾಡಿ, ತಾನೂ ನೇಣಿಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಹೊರವಲಯದಲ್ಲಿರುವ ಗಣೇಶನಗರದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಪತ್ನಿ ಮನಿಷಾ ಹಾಗೂ ಕೊಲೆ ಮಾಡಿ ನೇಣಿಗೆ ಶರಣಾದ ಪತಿಗೆ ಚಟ್ಟು ಗದಗವಾಲೆ. ಈ ದಂಪತಿಗೆ 3 ಹಾಗೂ 5 ವರ್ಷದ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಕಲೆದ ಮೂರು ದಿನಗಳ ಹಿಂದೆ ಕೂಡಾ ಚಟ್ಟು ನೇಣು ಹಾಕಿಕೊಳ್ಳಲು ಪ್ರಯತ್ನ ಮಾಡಿದ್ದ. ಆದರೆ ಪತ್ನಿ ಅದನ್ನ ತಪ್ಪಿಸಿದ್ದಳು. ಕಳೆದ ರಾತ್ರಿ ತನ್ನ ತಾಯಿಯ ಮನೆಯಲ್ಲಿದ್ದ ಮನಿಷಾ, ಚಟ್ಟುಗೆ ಊಟ ತಂದು ಕೊಟ್ಟು ವಾಪಸ್ ಹೋಗುವವಳಿದ್ದಳು. ಆದರೆ ಇವನ ಮಾನಸಿಕತೆ ಸರಿ ಇಲ್ಲ ಎಂದು ಅಲ್ಲೇ ಮಲಗಿದ್ಲು. ಪತ್ನಿ ಮಲಗಿದ್ದನ್ನ ನೋಡಿದ ಚಟ್ಟು, ಆಕೆಗೆ ಕಬ್ಬಿಣ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ, ನಂತರ ತಾನೂ ಅಲ್ಲೇ ನೇಣು ಹಾಕಿಕೊಂಡಿದ್ದಾರೆ.

ಚಟ್ಟು ಬಹಳ ದಿನಗಳ ಕಾಲ ಗೋವಾದಲ್ಲೇ ಇದ್ದ. ಅಲ್ಲೇ ಪೈಪ್‍ಲೈನ್ ಕೆಲಸ ಮಾಡುಕೊಂಡು ಜೀವನ ನಡೆಸಿದ್ದ. ಕಳೆದ 15 ದಿನಗಳ ಹಿಂದೆಯಷ್ಟೇ ಗೋವಾದಿಂದ ಬಂದಿದ್ದ. ಆದರೆ ಕಳೆದ ರಾತ್ರಿ ಕೂಡಾ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಪತಿ ಹಾಗೂ ಪತ್ನಿ ಸಾವನ್ನಪ್ಪಿದ ವಿಷಯ ತಿಳಿದು ಇಡಿ ಬಡಾವಣೆಯ ಜನರಿಗೆ ಶಾಕ್ ಆಗಿದೆ. ಅಲ್ಲದೇ ಇವರ ಮಕ್ಕಳ ಗತಿ ಏನು ಎಂದು ಜನರು ಕಣ್ಣಿರು ಕೂಡಾ ಹಾಕಿದರು.

ಪತಿ ಚಟ್ಟು ಕುಡಿತದ ಚಟಕ್ಕೆ ಕೂಡಾ ಬಿದ್ದಿದ್ದ. ಇದರಿಂದ ಬೆಸತ್ತ ಸಂಬಂಧಿಕರೂ ಕೂಡಾ ಬುದ್ಧಿ ಹೇಳಿ ಸಾಕಾಗಿತ್ತು. ಇನ್ನು ಈ ದಂಪತಿ ಮಕ್ಕಳು, ಅದೇ ಬಡಾವಣೆಯ ಅಜ್ಜನ ಮನೆಯಲ್ಲಿದ್ದವು. ಬೆಳಿಗ್ಗೆ ತಾಯಿ ಯಾಕೋ ಬಂದಿಲ್ಲ ಎಂದು ನೋಡಲು ಹೋದಾಗಲೇ ಈ ಘಟನೆ ಬೆಳಕಿಗೆ ಬಂದಿದೆ. ಇನ್ನು ಈ ಮಕ್ಕಳು ಕುಡಾ ಮನೆಯಲ್ಲಿ ಇದ್ದಿದ್ದರೆ, ಅವರನ್ನ ಕೂಡಾ ಇವನು ಏನಾದ್ರು ಮಾಡಿಬಿಟ್ಟಿದರಿದ್ದನೋ ಎಂಬ ಸಂಶಯ ಕೂಡಾ ಇಲ್ಲಿ ಬಂದಿದೆ.

ಉಪನಗರ ಠಾಣೆ ಪೊಲೀಸರು ಶವಗಳನ್ನ ಆಸ್ಪತ್ರೆಗೆ ರವಾನೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News