ಅಮೆರಿಕದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ, ಭಾರತಕ್ಕಿಂತ ಕಡಿಮೆ! petrol, diesel price hike in america

ಅಮೆರಿಕದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ, ಭಾರತಕ್ಕಿಂತ ಕಡಿಮೆ!

0

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಪೆಟ್ರೋಲ್‍ ಮತ್ತು ಡೀಸೆಲ್ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಭಾರತಕ್ಕೆ ಹೋಲಿಸಿದರೆ ಕಡಿಮೆ.

ಗ್ಯಾಲೋನ್ ಪೆಟ್ರೋಲ್ ದರ 4.31 ಡಾಲರ್ ಗೆ ಏರಿಕೆಯಾಗಿದೆ. ಅಂದರೆ ಭಾರತದ ರೂಪಾಯಿ ಪ್ರಕಾರ 329 ರೂ. ಆಗಿದೆ. 2008ರಲ್ಲಿ 4.11 ಡಾಲರ್ ಆಗಿದ್ದು, ನಂತರ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ. ಡೀಸೆಲ್ ಬೆಲೆ ಗ್ಯಾಲೋನ್ ಗೆ 5.05 ಡಾಲರ್ ಆಗಿದ್ದು, ಪೆಟ್ರೋಲ್ ಗಿಂತ ದುಬಾರಿಯಾಗಿದೆ.

ಅಮೆರಿಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಲೀಟರ್ ನಲ್ಲಿ ಮಾರಾಟ ಮಾಡುವುದಿಲ್ಲ.  ಒಂದು ಗ್ಯಾಲೋನ್ ಅಂದರೆ 3.4 ಲೀಟರ್ ಇರುತ್ತದೆ. ಅಂದರೆ ಲೀಟರ್ ಗೆ 86.97 ರೂ. ಆಗಿದೆ.

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 105 ರೂ. ಆಗಿದೆ. ಮುಂಬೈನಲ್ಲಿ 109 ರೂ. ಆಗಿದೆ.

Spread the love
Leave A Reply

Your email address will not be published.

Flash News