BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

161 PRISONERS RELEASED: 161 ಖೈದಿಗಳಿಗೆ ಬಿಡುಗಡೆ ಭಾಗ್ಯ..: “ಒಡಹುಟ್ಟಿದ”ವನಂತೆ ಜೈಲು ಹಕ್ಕಿಗಳನ್ನು ಬೀಳ್ಕೊಟ್ಟ ಸೂಪರಿಂಟೆಂಡೆಂಟ್ ರಂಗನಾಥ್…

ಬೆಂಗಳೂರು:ಹೊರ ಜಗತ್ತಿನ ಸಂಪರ್ಕ ಕಳೆದು ಕೊಂಡು ಮಾಡಿದ..(ಕೆಲವೊಮ್ಮೆ ಮಾಢಿರದ ತಪ್ಪುಗಳಿಂದಲೂ ಜೈಲುಸೇರಿರುವ ಉದಾಹರಣೆಗಳಿವೆ) ತಪ್ಪುಗಳಿಗಾಗಿ ಸಜೆ ಅನುಭವಿಸುತ್ತಿದ್ದ ಖೈದಿಗಳನ್ನು ಅವರ ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಲಾಗಿದೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವೂ ಸೇರಿದಂತೆ ರಾಜ್ಯದ ಅನೇಕ ಜೈಲುಗಳಲ್ಲಿ  ಅನೇಕ ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ 161 ಖೈದಿಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ.ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶಿಕ್ಷಾ ಬಂಧಿಗಳಿಗೆ ಇದರಿಂದ ಬಿಡುಗಡೆ ಭಾಗ್ಯ ಲಭಿಸಿದಂತಾಗಿದೆ.ಪರಪ್ಪನ ಅಗ್ರಹಾರದಲ್ಲಿ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು.ಜೈಲಿನ ಹೊರಗೊಂದು ಭಾವನಾತ್ಮಕ ಸನ್ನಿವೇಶ ನಿರ್ಮಾಣವಾದ್ರೆ,ಜೈಲಿನ ಒಳಗೊಂದು ಮಾರ್ಮಿಕವಾದ ವಾತಾವರಣ..ಇದಕ್ಕೆ ಕಾರಣ ಜೈಲು ಹಕ್ಕಿಗಳ ಬಿಡುಗಡೆ.

ಜೈಲು ಸೂಪರಿಂಟೆಂಡೆಂಟ್ ರಂಗನಾಥ್
ಜೈಲು ಸೂಪರಿಂಟೆಂಡೆಂಟ್ ರಂಗನಾಥ್

ಜೈಲು ಹಕ್ಕಿಗಳ ಪಾಲಿಗೆ ಅವರ ಆಪದ್ಭಾಂಧವರಂತೆ ಸ್ಪಂದಿಸುವ  ಸೂಪರಿಂಟೆಂಡೆಂಟ್ ರಂಗನಾಥ್ ಬಿಡುಗಡೆಯಾಗುವ ಖೈದಿಗಳನ್ನು ಸ್ವಾಗತಿಸಿ ಅವರುಗಳನ್ನು ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡುತ್ತಿದ್ದರು.ಅವರ ಕಾಲಿಗೆ ಬೀಳುವ ಜೈಲು ಹಕ್ಕಿಗಳಿಗೆ ತಿಳಿ ಹೇಳುತ್ತಿದ್ದರು.( ಅವರ ವೃತ್ತಿ ಜೀವನದಲ್ಲಿ ಹೀಗೆ ಸಾವಿರಾರು ಖೈದಿಗಳಿಗೆ ಸಾರ್ವಜನಿಕ ಜೀವನವನ್ನು ಕಳೆಯುವ ಅವಕಾಶ ಕಲ್ಪಿಸಿದ ಹಿರಿಮೆ-ಹೆಗ್ಗಳಿಕೆ ಅವರದು.)ಕೆಲಸ ಮಾಡಿದ ಸ್ಥಳದಲ್ಲೆಲ್ಲಾ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಿರುವುದು ರಂಗನಾಥ್ ಅವರ ವೃತ್ತಿ ಜೀವನದ ಮಟ್ಟಿಗೆ ಸಕಾರಾತ್ಮಕವಾದ ಸಂಗತಿ.

ಹೀಗೆ ಜೈಲು ಹಕ್ಕಿಗಳನ್ನು ಬಿಡುಗಡೆಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ರಂಗನಾಥ್ ಅವರ ಕಾಲಿಗೆ ನಮಸ್ಕರಿಸಿ ಅವರ ಮುಂದೆ ಇನ್ಮುಂದೆ ಜೈಲಿಗೆ ಬರುವಂಥ ಕೆಲಸ ಮಾಢೊಲ್ಲ ಎಂಬ ಪ್ರತಿಜ್ಞೆ ಮಾಡುತ್ತಿದ್ದ ಖೈದಿಗಳ ಸನ್ನಿವೇಶ ಮನಮಿಡಿಯುವಂತಿತ್ತು.ಅಷ್ಟೇ ಅಲ್ಲ ಖೈದಿಗಳ ಮನೆಗಳವರು ಕೂಡ ಹೃದಯತುಂಬಿ ಅವರನ್ನು ಆಶೀರ್ವದಿಸುತ್ತಿದ್ದರು.

ಹಾಗೆ ಬಿಡುಗಡೆಗೊಂಡ ಜೈಲು ಹಕ್ಕಿಗಳಲ್ಲಿ  ಮಹಿಳೆಯರೂ ಇದ್ದುದು ವಿಶೇಷ.ಅನೇಕ ಮಹಿಳಾ ಖೈದಿಗಳಿಗೂ ತಿಳಿ ಹೇಳಿ ಗೌರವಯುತ ಬದುಕನ್ನು ನಡೆಸುವ ಮಾರ್ಗದರ್ಶನ ನೀಡಿದ್ದು ವಿಶೇಷ.ಜೈಲಿನಿಂದ ಹೊರ ಹೋದ ಮೇಲೆಯೂ ಹೇಗೆ ಗೌರವಯುತವಾದ ಬದುಕು ನಡೆಸಲು ಅವಕಾಶಗಳು ಬೇಕೆನ್ನುವುದನ್ನು ಜೈಲಿನಲ್ಲಿಯೇ ವೃತ್ತಿಪರ ತರಬೇತಿ ನೀಡುವುದರೊಂದಿಗೆ ಸ್ವ ಉದ್ಯೋಗ ಕಲ್ಪಿಸುವ ಅವಕಾಶದ ಬಾಗಿಲನ್ನು ತೆರೆಯಿಸಿಕೊಟ್ಟವರು ಇದೇ ರಂಗನಾಥ್..ಹಾಗಾಗಿಯೇ ಬಿಡುಗಡೆ ಆದವರು ರಂಗನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತಲೇ ನಿರ್ಗಮಿಸಿದರೆನ್ನುವುದು ವಿಶೇಷ..

03-08-2021 ರಂದು ಸರ್ವೋಚ್ಛ ನ್ಯಾಯಾಲಯ ಸನ್ನಡತೆ ಆಧಾರದಲ್ಲಿ ಸಜಾಬಂಧಿಗಳನ್ನು ಅವಧಿಪೂರ್ವ ಆಧಾರದಲ್ಲಿ ಬಿಡುಗಡೆಗೊಳಿಸುವಂತೆ ಆದೇಶ ನೀಡಿತ್ತು.ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸ್ಥಾಯಿ ಸಲಹಾ ಮಂಡಳಿಗಳು ವಿವಿಧ ಕಾರಾಗೃಹಗಳಲ್ಲಿರುವ ಖೈದಿಗಳ ಬಿಡುಗಡೆಗೆ ಸಲಹೆ ನೀಡಿದ್ವು.ಜತೆಗೆ 22 ಖೈದಿಗಳ ಬಿಡುಗೆಯ ಪ್ರಸ್ತಾಪವನ್ನೂ ತಿರಸ್ಕರಿಸಲಾಗಿತ್ತು.

ಅಂತಿಮವಾಗಿ 28-10-2021 ಮತ್ತು 02-11-2021 ರಂದು ನಡೆದ ಎಲ್ ಸಿ ಆರ್ ಸಮಿತಿ ಸಭೆಯಲ್ಲಿ 166  ಖೈದಿಗಳ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿತ್ತು.ಆದರೆ 166 ಖೈದಿಗಳ ಪೈಕಿ 5 ಖೈದಿಗಳು ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದಾಗಿ ಅವರ ಬಿಡುಗಡೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು.ಇದರನ್ವಯ ಅಂತಿಮವಾಗಿ 161 ಖೈದಿಗಳನ್ನು ಬಿಡುಗಡೆಗೊಳಿಸಲಾಗಿದೆ.

ಘನತವೆತ್ತ ರಾಜ್ಯಪಾಲರು ಮರುಪರಿಶೀಲಿಸಲು ನಿರ್ದೇಶನ ನೀಡಿದ್ದ ಪ್ರಕರಣಗಳಲ್ಲಿ ಬಿಡುಗಡೆಗೊಂಡ 85 ಖೈದಿಗಳು  ಹಾಗೂ ಅವಧಿಪೂರ್ವ ಬಿಡುಗಡೆ ಸಂಬಂಧ ಎಲ್ ಸಿಆರ್ ಸಮಿತಿ ಶಿಫಾರಸ್ಸು ಮಾಡಿದ ಪ್ರಕರಣಗಳಲ್ಲಿ 76 ಖೈದಿಗಳನ್ನು ಅಂತಿಮವಾಗಿ ಬಿಡುಗಡೆಗೊಳಿಸಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News