Breakingದೇಶ-ವಿದೇಶ

ಪಂಜಾಬ್ ಸಿಎಂ ಸ್ಥಾನ ಅಲಂಕರಿಸುವ ಮುನ್ನವೇ ಪ್ರತಿಪಕ್ಷಗಳಿಗೆ ಶಾಕ್ ಕೊಟ್ಟ ಭಗವತ್ ಮನ್! Bhagwant Mann issues orders to withdraw security of 122 former MPs, MLAs in Punjab

ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಭಗವತ್ ಮನ್ 122 ಮಾಜಿ ಶಾಸಕ ಹಾಗೂ ಸಂಸದರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯಲು ಆದೇಶಿಸಿದ್ದಾರೆ.

ಮಾರ್ಚ್ 16ರಂದು ಭಗವತ್ ಮನ್ ಭಗತ್ ಸಿಂಗ್ ತವರೂರಿನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಮಹತ್ವದ ಆದೇಶ ಹೊರಡಿಸಿರುವ ಅವರು, ಮಾಜಿ ಶಾಸಕರು ಮತ್ತು ಸಂಸದರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ವಾಪಸ್ ಪಡೆಯಲು ಸೂಚಿಸಿದ್ದಾರೆ.

ಭದ್ರತೆ ಪಡೆಯುತ್ತಿದ್ದ ಪ್ರಮುಖರಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚರಣ್ ಜೀತ್ ಸಿಂಗ್ ಚನ್ನಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮತ್ತು ಅಕಾಲಿದಳ ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.

ರಾಜ್ಯದಲ್ಲಿ ಒಂದು ಪೊಲೀಸ್ ಠಾಣೆ ಖಾಲಿ ಇದೆ. ಮತ್ತೊಂದೆಡೆ ಶಾಸಕರು ಮತ್ತು ಸಂಸದರ ಮನೆ ಮುಂದೆ ಶಿಬಿರದಲ್ಲಿ ಪೊಲೀಸರು ಭದ್ರತೆ ಕಾಯುವ ಪರಿಸ್ಥಿತಿ ಇದೆ. ನಮಗೆ ಸಾಮಾನ್ಯ ಜನರ ರಕ್ಷಣೆ ಮುಖ್ಯ ಎಂದು ಭಗವತ್ ಮನ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News