Breakingರಾಜಕೀಯ

ಕಾಂಗ್ರೆಸ್ ನಿಂದ ಗಾಂಧಿ ಕುಟುಂಬ ಹೊರಗೆ ಬರುತ್ತಾ? ನಾಳೆ ನಿರ್ಧಾರ ಪ್ರಕಟ Congress Working Committee to meet on Sunday to discuss party’s poll washout

ಪಂಚರಾಜ್ಯಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಳೆ ತುರ್ತು ಸಭೆ ಕರೆದಿದ್ದು, ಪಕ್ಷದ ಸ್ಥಾನಗಳಿಗೆ ಗಾಂಧಿ ಕುಟುಂಬದ ಮೂವರೂ ಸದಸ್ಯರೂ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮೂವರು ಪಕ್ಷದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ದಿಢೀರ್ ಮುಂದೂಡಿರುವ ಸೋನಿಯಾ ಗಾಂಧಿ ನಾಳೆ ತುರ್ತು ಸಭೆ ಕರೆದಿದ್ದು, ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಲು ಗಾಂಧಿ ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News