ಕಾಂಗ್ರೆಸ್ ಮುಖಂಡನ ಮನೆಯಿಂದ 3 ಕೆಜಿ ಚಿನ್ನಾಭರಣ ಕಳ್ಳತನ! congress leader house thieft
ಕಾಂಗ್ರೆಸ್ ಮುಖಂಡನ ಮನೆಯಿಂದ 3 ಕೆಜಿ ಚಿನ್ನಾಭರಣ ಕಳ್ಳತನ!
ಧರ್ಮಸ್ಥಳಕ್ಕೆ ಹೋಗಿದ್ದಾಗ ಕಾಂಗ್ರೆಸ್ ಮುಖಂಡನ ಮನೆಯನ್ನು ದುಷ್ಕರ್ಮಿಗಳು ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಪುಟ್ಟೇನಹಳ್ಳಿಯ ಕ್ಲಾಸಿಕ್ ಆರ್ಕಿಡ್ ಬಡಾವಣೆಯಲ್ಲಿರುವ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಕಳ್ಳತನ ಆಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಅವರ ನಿವಾಸದಲ್ಲಿ ಕಳ್ಳತನವಾಗಿದ್ದು, ಸೆಕ್ಯೂರೆಟಿ ಗಾರ್ಡ್ ಈ ಕಳ್ಳತನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕಾಂಗ್ರೆಸ್ ಮುಖಂಡ ಹಾಗೂ ಕುಟುಂಬದವರು ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.