ಪುಸ್ತಕ ಮೇಳದಲ್ಲಿ ಹಣ ಕದ್ದು ಸಿಕ್ಕಿಬಿದ್ದ ನಟಿ! actress arrest after thief purse
ಪುಸ್ತಕ ಮೇಳದಲ್ಲಿ ಹಣ ಕದ್ದು ಸಿಕ್ಕಿಬಿದ್ದ ನಟಿ!
ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಕೋಲ್ಕತಾದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಗಮನ ಬೇರೆಡೆ ಸೆಳೆದು ಹಣ ಕದ್ದು ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಕಿರುತೆರೆಯಲ್ಲಿ ಪ್ರಸಾರವಾಗುವ ಸೋಪು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರುವ ರೂಪಾ ದತ್ತ, ಪೊಲೀಸರು ತಪಾಸಣೆಗೆ ಬರುತ್ತಿದ್ದಂತೆ ಪರ್ಸ್ ಅನ್ನು ಸಮೀಪದ ಕಸದ ಬುಟ್ಟಿಯಲ್ಲಿ ಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
ಪೊಲೀಸರು ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವಾರು ಪರ್ಸ್ ಗಳು ಪತ್ತೆಯಾಗಿದ್ದು, ಸುಮಾರು 75 ಸಾವಿರ ರೂ. ನಗದು ಪತ್ತೆಯಾಗಿದೆ.