Breakingಕ್ರೈಮ್ /ಕೋರ್ಟ್

ಅಪ್ಪನ ಜೊತೆ ಜಗಳವಾಡಿ 9 ವರ್ಷದ ಬಾಲಕ ಆತ್ಮಹತ್ಯೆ! 9 year child sucide after fight with father

ಅಪ್ಪನ ಜೊತೆ ಜಗಳವಾಡಿ ಸಿಟ್ಟಿನಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಜೋಕಾಲಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ  ಆಲ್ದೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಶೇಷಗಿರಿ ಗ್ರಾಮದವರಾಗಿದ್ದು, ಪೋಷಕರು ನಾಲ್ಕೈದು ವರ್ಷಗಳಿಂದ ಆಲ್ದೂರಿ ನೆಲೆಸಿದ್ದ ಪೋಷಕರ ಪುತ್ರ ಚೇತನ್ (9) ಮೃತ ಬಾಲಕ.

ಇಬ್ಬರು ಗಂಡು ಮಕ್ಕಳೊಂದಿಗೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿಸದ್ದ ಕುಟುಂಬ ಕಾಫಿತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಆಗಾಗ್ಗೆ ರಾಣಿಬೆನ್ನೂರಿಗೆ ಹೋಗಿ ಬರುತ್ತಿತ್ತು.

ಆತ್ಮಹತ್ಯೆ ಮಾಡಿಕೊಂಡ ಬಾಲಕನಿಗೆ ಸಿಟ್ಟು ಜಾಸ್ತಿ ಎಂದು ಹೇಳಲಾಗಿದ್ದು, ಅಪ್ಪನ ಜೊತೆ ಆಗಾಗ ಜಗಳ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆ ರಾಣಿಬೆನ್ನೂರಿನಲ್ಲಿ ಜಾತ್ರೆಗಾಗಿ ಎಲ್ಲರೂ ಹೋಗಿದ್ದಾಗ ಅಪ್ಪನ ಜೊತೆ ಮತ್ತೆ ಜಗಳ ಮಾಡಿದ್ದ. ಅದೇ ಸಿಟ್ಟಿನಲ್ಲಿ ಬಾಲಕ ಮನೆಯಲ್ಲಿನ ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಓದಿನಲ್ಲಿ ಚುರುಕು ಹಾಗೂ ಸದಾ ಲವಲವಿಕೆಯಿಂದ ಇರುತ್ತಿದ್ದ. ಬಾಲಕನ ಸಾವಿಗೆ ಶಾಲೆಯ ಶಿಕ್ಷಕ ವರ್ಗ ಕೂಡ ಬೇಸರ ವ್ಯಕ್ತಪಡಿಸಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News