ಕೆರೆಯಲ್ಲಿ ಮುಳುಗಿ ಅಜ್ಜ, ಮಗ, ಮೊಮ್ಮಗ ದುರ್ಮರಣ three memebrs of one familly drown

ಕೆರೆಯಲ್ಲಿ ಮುಳುಗಿ ಅಜ್ಜ, ಮಗ, ಮೊಮ್ಮಗ ದುರ್ಮರಣ

0

ನೀರಿನಲ್ಲಿ ಮುಳುಗುತ್ತಿರುವ ಒಬ್ಬರನೊಬ್ಬರು ಪರಸ್ಪರ ಉಳಿಸಲು ಹೋಗಿ, ಒಂದೇ ಕುಟುಂಬದ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಸಂಭವಿಸಿದೆ.

ನರಸಂಪೇಟೆ ಮಂಡಲದ ಚಿನ್ನ ಗುರಿಜಾಲ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ (65), ಲಕ್ಕಿ (12), ನಾಗರಾಜು (35) ಮೃತಪಟ್ಟವರು.

ಕೃಷ್ಣಮೂರ್ತಿ ಕೆರೆಯಲ್ಲಿ ಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು. ಕೃಷ್ಣಮೂರ್ತಿ ಜೊತೆಯಲ್ಲಿದ್ದ ಅವರ ಮೊಮ್ಮಗ ಲಕ್ಕಿ ತಾತನನ್ನು ರಕ್ಷಿಸಲು ಕೆರೆಗೆ ಹಾರಿದ್ದಾನೆ.

ವೇಳೆ ಇಬ್ಬರೂ ಮುಳುಗಲು ಪ್ರಾರಂಭಿಸಿದರು. ಸಮೀಪದಲ್ಲಿಯೇ ಇದ್ದ ಕೃಷ್ಣಮೂರ್ತಿ ಮಗ ನಾಗರಾಜು ತನ್ನ ತಂದೆ ಮತ್ತು ಮಗನನ್ನು ರಕ್ಷಿಸಲು ಸರೋವರಕ್ಕೆ ಹಾರಿದನು. ಮೂವರು ನೀರಿನ ಆಳಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ.

ಪೊಲೀಸರು ಗ್ರಾಮಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಸ್ಥರ ಪ್ರಕಾರ ಮೂವರಿಗೂ ಈಜು ಬರುತ್ತಿರಲಿಲ್ಲ.

Spread the love
Leave A Reply

Your email address will not be published.

Flash News