ರಾಜ್ಯದಲ್ಲಿ 106 ಕೊರೊನಾ ಸೋಂಕು ಪತ್ತೆ, 23 ಜಿಲ್ಲೆಗಳಲ್ಲಿ ಶೂನ್ಯ! 106 corona cases in karnataka

ರಾಜ್ಯದಲ್ಲಿ 106 ಕೊರೊನಾ ಸೋಂಕು ಪತ್ತೆ, 23 ಜಿಲ್ಲೆಗಳಲ್ಲಿ ಶೂನ್ಯ!

0

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 106 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 23 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 39,43,912ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 40 ಲಕ್ಷ ಗಡಿ (40,022) ದಾಟಿದೆ.

ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 337 ಮಂದಿ ಸೋಂಕಿತರು ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 39,01,430ಕ್ಕೆ ಏರಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 2420ಕ್ಕೆ ಜಾರಿದೆ.

Spread the love
Leave A Reply

Your email address will not be published.

Flash News