ಕರುಣಾರತ್ನೆ ಶತಕ ವ್ಯರ್ಥ: ಭಾರತಕ್ಕೆ ದಾಖಲೆಯ 238 ರನ್ ಜಯ india win by 238 runs in bengaluru test

ಕರುಣಾರತ್ನೆ ಶತಕ ವ್ಯರ್ಥ: ಭಾರತಕ್ಕೆ ದಾಖಲೆಯ 238 ರನ್ ಜಯ

0

ನಾಯಕ ಧಿಮುಕ್ ಕರುಣಾರತ್ನೆ ಶತಕದ ಹೊರತಾಗಿಯೂ ಶ್ರೀಲಂಕಾ ತಂಡ 238 ರನ್ ಗಳ ಭಾರೀ ಅಂತರದಿಂದ ಸೋಲುಂಡಿದೆ. ಈ ಮೂಲಕ ಭಾರತ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ 3ನೇ ದಿನ ಚಹಾ ವಿರಾಮಕ್ಕೂ ಮುನ್ನವೇ ಶ್ರೀಲಂಕಾ ತಂಡ 208 ರನ್ ಗಳಿಗೆ ಆಲೌಟಾಯಿತು.

ಭಾರತದ ದಾಳಿಗೆ ತತ್ತರಿಸಿದ ಶ್ರೀಲಂಕಾ ಒಂದು ಕಡೆ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ನಾಯಕ ಧಿಮುಕ್ ಕರುಣಾರತ್ನೆ ಶತಕದ ಗೌರವ ಸಂಪಾದಿಸಿದರು.

ಕರುಣಾರತ್ನೆ 174 ಎಸೆತಗಳಲ್ಲಿ 15 ಬೌಂಡರಿ ಸೇರಿದ 107 ರನ್ ಗಳಿಸಿ ಔಟಾದರು. ಧಿಮುಕ್ ಮತ್ತು ಕುಶಾಲ್ ಮೆಂಡಿಸ್ (54 ರನ್) 2ನೇ ವಿಕೆಟ್ ಗೆ 97 ರನ್ ಜೊತೆಯಾಟ ನಿಭಾಯಿಸಿದರು. ಇದು ತಂಡದ ಪರ ದೊಡ್ಡ ಜೊತೆಯಾಟವಾಯಿತು.

ಭಾರತದ ಪರ ಆರ್.ಅಶ್ವಿನ್ 4 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ 3, ಅಕ್ಸರ್ ಪಟೇಲ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಹೊನಲು ಬೆಳಕಿನಲ್ಲಿ ಪಿಂಕ್ ಬಣ್ಣದ ಚೆಂಡಿನಲ್ಲಿ ನಡೆದ ಪಂದ್ಯದಲ್ಲಿ 447 ರನ್ ಗಳ ಗುರಿ ಬೆಂಬತ್ತಿದ ಶ್ರೀಲಂಕಾ ಹೆಚ್ಚು ಪ್ರತಿರೋಧ ಇಲ್ಲದೇ ಶರಣಾಯಿತು. ಈ ಮೂಲಕ ಭಾರತ ಮೂರೇ ದಿನದಲ್ಲಿ ಗೆಲುವಿನ ನಗೆ ಬೀರಿತು.

Spread the love
Leave A Reply

Your email address will not be published.

Flash News