Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

UTTAR PRADESH MODEL WILL EFFECT ON BBMP ELECTION ..!?-MANY BJP EX CORPORATORS MAY LOOSE TICKETS..?! ಉ.ಪ್ರ ರಿಸಲ್ಟ್ ಎಫೆಕ್ಟ್..?! ಬಹುತೇಕ BBMP ಮಾಜಿ ಕಾರ್ಪೊರೇಟರ್ಸ್ ಗಿಲ್ವಂತೆ “ಟಿಕೆಟ್”..!:

ಬೆಂಗಳೂರು:ಕರ್ನಾಟಕದ ಮಟ್ಟಿಗೆ ಸಧ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ದೃಷ್ಟಿ ಕೇಂದ್ರೀಕರಿಸಿರುವುದು  ಬಿಬಿಎಂಪಿ ಚುನಾವಣೆಯತ್ತ.ಅದಕ್ಕೆ ಮುಹೂರ್ತ ಯಾವತ್ ಫಿಕ್ಸ್ ಆಗುತ್ತೋ ಇಲ್ವೋ ಗೊತ್ತಿಲ್ಲ..ಆದ್ರೆ ಪಕ್ಷಗಳು ಮಾತ್ರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿವೆ.ಇದೆಲ್ಲದರ ನಡುವೆ ಬಿಜೆಪಿ ಪಕ್ಷ ಮಾತ್ರ ಹೊಸದೊಂದು ಬದಲಾವಣೆಯನ್ನು ಮಾಡಲಿಕ್ಕೆ ಹೊರಟಿದೆ ಎನ್ನುವ ಸುದ್ದಿ  ಪಕ್ಷದ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.ಪಕ್ಷದ ವರಿಷ್ಠರು ಉತ್ತರ ಪ್ರದೇಶ ಫಾರ್ಮುಲಾವನ್ನು ಅಳವಡಿಸಿಕೊಳ್ಳೊಕ್ಕೆ ಹೊಟಿದ್ದಾರೆನ್ನುವುದೇ ಚರ್ಚೆಗೆ ಮುಖ್ಯ ಕಾರಣ..ಹಾಗೆಂದುಕೊಂಡಿದ್ದೇ ಆದಲ್ಲಿ  ಟಿಕೆಟ್ ನಿರೀಕ್ಷೆಯಲ್ಲಿರುವ ಸಾಕಷ್ಟು ಮಾಜಿ ಕಾರ್ಪೊರೇಟರ್ಸ್ ಗಳಿಗೆ ಸ್ಪರ್ದೆಯ ಅವಕಾಶ ಕೈ ತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ.

ಹೌದು.. ಅಚ್ಚರಿ ಎನಿಸಿದರೂ ಇದು ಸತ್ಯ..ಹಳಬರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಿ ಅದರಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯಾನಂದ್ ಅವರ ಫಾರ್ಮೂಲವನ್ನೇ ಬಿಬಿಎಂಪಿ ಎಲೆಕ್ಷನ್ ನಲ್ಲೂ ಅಳವಡಿಸುವ ಪ್ರಯತ್ನಗಳು ಬಿಜೆಪಿ ಪಕ್ಷದಲ್ಲಿ ಬಲವಾಗಿ ನಡೆಯುತ್ತಿವೆ ಎನ್ನುವ ಸುದ್ದಿ ಕೇಳಿಬರುತ್ತಿದೆ.ಇದು  2015 ರಿಂದ 2020ರ ಅವಧಿಯಲ್ಲಿ ಕಾರ್ಪೊರೇಟರ್ಸ್ ಗಳಾಗಿದ್ದ ಸಾಕಷ್ಟು ಚುನಾಯಿತರಿಗೆ ಶಾಕ್ ನೀಡಿದೆಯಂತೆ.ಇಂತದ್ದೊಂದು ವರ್ತಮಾನ ಹಾಗೂ ಬೆಳವಣಿಗೆ ಪಕ್ಷದಲ್ಲಿ ನಡೆಯುತ್ತಿದೆಯೇ..? ನಡೆಯುತ್ತಿರುವುದು ನಿಜವಾದ್ರೆ ತಮ್ಮನ್ನು ಹೇಗೆ ಪಾರು ಮಾಡಿಕೊಳ್ಳುವುದು..? ಟಿಕೆಟ್ ಗಿಟ್ಟಿಸಿಕೊಳ್ಳೊಕ್ಕೆ ಏನ್ ಮಾಡಬಹುದೆನ್ನುವ ಆಲೋಚನೆಯಲ್ಲಿ ಮುಳುಗುವಂತೆ ಮಾಡಿದೆಯಂತೆ.

ನಿಮಗೆ ಗೊತ್ತಿರಲಿ ಎಂದು ಹೇಳ್ತೇವೆ ಕೇಳಿ..ಮೊನ್ನೆ ನಡೆದ 403 ಸಂಖ್ಯಾಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಾಗಿರುವ 45 ಚುನಾಯಿತರಿಗೆ ಮೋದಿ ಅವರ ಸೂಚನೆ ಮೇರೆಗೆ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು.(ಅಸೆಂಬ್ಲಿಗೆ ಸ್ಪರ್ಧಿಸಲು ಹಾಲಿ ಸಂಸದರು ಮುಂದಾದಾಗ ಅವರಿಗೆ ಟಿಕೆಟ್ ನಿರಾಕರಿಸಿದ್ದು ನಾನೇ ಎನ್ನುವ ಮಾತನ್ನು ಪ್ರಧಾನಿ ಮೋದಿ ಅವರೂ ಒಪ್ಪಿಕೊಂಡಿದ್ದರೆನ್ನುವುದನ್ನು ಮಾದ್ಯಮಗಳೂ ಪ್ರಕಟಿಸಿವೆ). ಈ ಫಾರ್ಮ್ಯೂಲಾ ವರ್ಕೌಟ್ ಕೂಡ ಆಗಿತ್ತು.ಇದರಿಂದ ಉತ್ತೇಜಿತರಾಗಿರುವ ಮೋದಿ ಅವರೇ ಎಲ್ಲಾ ರಾಜ್ಯದಲ್ಲೂ ಈ ಸಿದ್ದಸೂತ್ರವನ್ನು ಅಳವಡಿಸಿ ನೋಡಿ ಎನ್ನುವ ಸಂದೇಶ ರವಾನಿಸಿದ್ದಾರಂತೆ.ಇದನ್ನು ಬಿಬಿಎಂಪಿ ಎಲೆಕ್ಷನ್ ನಲ್ಲು ಅಳವಡಿಸಲು ಸೂಚನೆ ಸಿಕ್ಕಿದೆ ಎನ್ನಲಾಗಿದ್ದು,ವರಿಷ್ಠರು ಇದಕ್ಕಾಗಿ ಹೊಸ ಮುಖಗಳ ಅನ್ವೇಷಣೆಯಲ್ಲೂ ತೊಡಗಿದ್ದಾರೆ ಎನ್ನಲಾಗಿದೆ.

198 ಸದಸ್ಯ ಬಲದ ಬಿಬಿಎಂಪಿಯಲ್ಲಿ ಕಳೆದ ಬಾರಿ ಹೆಚ್ಚು ಸ್ಥಾನಗಳನ್ನು ಗಳಿಸಿಯೂ ಬಿಜೆಪಿ ಕೆಲವು ಮುಖಂಡರ ಅತಿಯಾದ ಆತ್ಮವಿಶ್ವಾಸ ಹಾಗೂ ಹೊಣೆಗೇಡಿತನದಿಂದ ನಾಲ್ಕು ವರ್ಷ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂತು.ಕೊನೇ ಅವಧಿಗಷ್ಟೇ ಬಿಜೆಪಿ ತನ್ನ ಅಭ್ಯರ್ಥಿಯನ್ನು  ಮೇಯರ್ ಸ್ಥಾನದಲ್ಲಿ ಪ್ರತಿಷ್ಟಾಪಿಸಲು ಯಶಸ್ವಿಯಾಗಿತ್ತು.ಇದರಿಂದ ಸಾಕಷ್ಟು ಪಾಠ ಕಲಿತಿರುವ ವರಿಷ್ಠರು ಈ ಬಾರಿಯ ಚುನಾವಣೆಯಲ್ಲಿ ತೂಗಿ ಅಳೆದು ಟಿಕೆಟ್ ನೀಡೋ ನಿರ್ದಾರಕ್ಕೆ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಈ ನಡುವೆಯೆ ಬಾಂಬ್ ಎನ್ನುವ ರೀತಿಯಲ್ಲಿ ಉತ್ತರ ಪ್ರದೇಶ ಫಾರ್ಮೂಲಾವನ್ನು ಎಸೆಯೊಕ್ಕೆ ಹೈಕಮಾಂಡ್ ಸಿದ್ಧವಾಗಿದೆ ಎನ್ನುವ ಮಾತು ಕೇಳಿಬಂದಿದೆ.ಟಿಕೆಟ್ ಆಕಾಂಕ್ಷಿಗಳಾಗಿರುವ ಹೊಸಬರಿಗೆ ಇದು ವರದಾನವಾದ್ರೆ ಹಳೆಯ ಹುಲಿಗಳಿಗೆ ಮಾರಕವಾಗಲಿದೆ ಎನ್ನಲಾಗ್ತಿದೆ.ಆ ಫಾರ್ಮೂಲಾ ಅಳವಡಿಸೋದೇ ಸತ್ಯವಾದ್ರೆ ಅಧಿಕಾರದ ಗದ್ದುಗೆ ಹಿಡಿಯೋ ಉಮೇದಿನಲ್ಲಿರುವ ಬಹುತೇಕ ಮಾಜಿ  ಕಾರ್ಪೊರೇಟರ್ ಗಳಿಗೆ ಟಿಕೆಟ್ ಕೈ ತಪ್ಪಬಹುದೆನ್ನಲಾಗ್ತಿದೆ.

ಹೆಸರು ಹೇಳಲಿಚ್ಛಿಸದ ಬಿಜೆಪಿಯ ಮುಖಂಡರೇ ಇಂತದ್ದೊಂದು ಸ್ಪೋಟಕ ವಿಚಾರವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.

“ಬಹುತೇಕ ಹಳಬ  ಕಾರ್ಪೊರೇಟರ್ಸ್ ಗಳ ಬಗ್ಗೆ ವಾರ್ಡ್ ಗಳಲ್ಲಿ ಜನರಿಗೆ ಒಲವಿಲ್ಲ..ಅವರುಗಳ ಸ್ಪರ್ಧೆ ಬಗ್ಗೆಯೂ ಸಹಮತವಿಲ್ಲ..ಜನರಿಗೇ ಏಕೆ ಪಕ್ಷದ ಕಾರ್ಯಕ ರ್ತರೇ ಬೇಸತ್ತಿದ್ದಾರೆ.ಪಕ್ಷದ ಅಣತಿ ಎನ್ನುವ ಕಾರಣಕ್ಕೆ ವಿಧಿಯಿಲ್ಲದೆ ಕೆಲಸ ಮಾಡಬೇಕಾಗಿ ಬಂದಿದೆ.ಹೊಸ ಮುಖಗಳ ನಿರೀಕ್ಷೆಯಲ್ಲಿರುವವರೇ ಹೆಚ್ಚಾಗಿರುವುದರಿಂದ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡೊಕ್ಕೆ ವರಿಷ್ಠರು ಚಿಂತಿಸಿದ್ದಾರೆ.ಹಾಗಾಗಿ ಹೊಸ ಮುಖಗಳಿಗೆ ಮಣೆ ಹಾಕುವ ವಿಚಾರ ಮುನ್ನಲೆಗೆ ಬಂದಿದೆ.ಉತ್ತರ ಪ್ರದೇಶ ಎಲೆಕ್ಷನ್ ನಲ್ಲಿಯೇ ಈ ಫಾರ್ಮೂಲಾ ವರ್ಕೌಟ್ ಆಗಿರುವುದು ಯಾರೇ ಹೊಸಬರಿಗೆ ಅವಕಾಶ ಕೊಟ್ಟರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆನ್ನುವ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ.ಹಾಗಾಗಿಯೇ ಉತ್ತರ ಪ್ರದೇಶ ಫಾರ್ಮೂಲಾ ಇಲ್ಲಿ ಇಂಪ್ಲಿಮೆಂಟ್ ಆದ್ರೂ ಆಶ್ಚರ್ಯಪಡಬೇಕಿಲ್ಲ”

ಹೆಸರು ಹೇಳಲಿಚ್ಛಿಸದ ಬಿಜೆಪಿ ಹಿರಿಯ ನಾಯಕರು

ಒಂದ್ವೇಳೆ ಹಾಗಾದಲ್ಲಿ ನಿಮ್ಮ ಕಥೆಯೇನು ಎಂದು ಟಿಕೆಟ್ ನಿರೀಕ್ಷೆಯಲ್ಲಿರುವ ಒಂದಷ್ಟು ಮಾಜಿ ಕಾರ್ಪೊರೇಟರ್ಸ್ ಗಳನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಕೇಳಿದಾಗ

ನಮ್ಮ ವ್ಯಕ್ತಿತ್ವ-ಚಾರಿತ್ರ್ಯ-ಕಾರ್ಯವೈಖರಿ-ಅನುದಾನ ಸದ್ಭಳಕೆ ಹಾಗು ಜನಸ್ಪಂದನದಂಥ ಮಾನದಂಡಗಳ ಮೇಲೆ ನಿರ್ಧರಿಸಲಿ.ಯಾರು ಈ ಮಾನದಂಡಗಳನ್ನು ಫುಲ್ ಫಿಲ್ ಮಾಡೋದಿಲ್ವೋ ಅವರಿಗೆ ಅವಕಾಶ ನಿರಾಕರಿಸಲಿ ನಮ್ಮದೇನೂ ಅಭ್ಯಂತರವಿಲ್ಲ..ಆದ್ರೆ ಉತ್ತಮ ಕೆಲಸದ ಹೊರತಾಗಿಯೂ ಟಿಕೆಟ್ ನಿರಾಕರಿಸಿದ್ರೆ ಬೇಸರವಾಗುತ್ತೆ..ಈ ಬಗ್ಗೆ ನಮಗೂ ಅಂಥದ್ದೇ ಸುಳಿವು ಸಿಕ್ಕಿದೆ.ಆದರೆ ವರಿಷ್ಠರನ್ನು ವಿಚಾರಿಸಲಾಗಿ ಇಲ್ಲ ಎನ್ನುವ ಉತ್ತರ ಸಿಕ್ಕಿದೆ”

                                                                                                                                                    -ಬಿಬಿಎಂಪಿ ಮಾಜಿ ಕಾರ್ಪೊರೇಟರ್

ಇನ್ನು ಕೆಲವರು ಪಕ್ಷಕ್ಕೆ ನಿಷ್ಠರಾಗಿದ್ದುಕೊಂಡೇ ಕೆಲಸ ಮಾಡುತ್ತೇವೆ.ಹೈಕಮಾಂಡ್ ಹೊಸಬರನ್ನು ಸೂಚಿಸಿದ್ರೆ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ.ನಮಗೂ ಅಧಿಕಾರ ಇಲ್ಲದಾಗ ಗುರುತಿಸಿ ಟಿಕೆಟ್ ಕೊಟ್ಟು ಕಾರ್ಪೊರೇಟರ್ ಆಗುವ ಅವಕಾಶ ಕೊಟ್ಟಿಲ್ವಾ..ನಮ್ಮಂತೆ ಇತರರಿಗೂ ಕಾರ್ಪೊರೇಟರ್ ಆಗೋ ಆಸೆ ಇರೊಲ್ವೆ..ಹಾಗಾಗಿ ಹೈಕಮಾಂಡ್ ಸೂಚಿಸಿದವರ ಪರ ಕೆಲಸ ಮಾಡೋದಾಗಿ ಹೇಳಿದ್ರು.

ಇದೆಲ್ಲದರ ನಡುವೆಯೇ ನಮ್ಮ ಜೇಷ್ಠತೆ-ಅನುಭವ-ಹಿರಿತನಕ್ಕೆ ಬೆಲೆ ಕೊಡಲೇಬೇಕು..ಟಿಕೆಟ್ ಕೊಟ್ರೆ ಪಕ್ಷದಲ್ಲಿ ಇರುತ್ತೇವೆ.ಇಲ್ಲವಾದಲ್ಲಿ ಬೇರೆ ದಾರಿ ಹುಡುಕಿಕೊಳ್ಳುತ್ತೇವೆ.ಬೆಲೆ ಇಲ್ಲದ ಜಾಗದಲ್ಲಿ ಇರೋದಕ್ಕಿಂತ ಬೆಲೆ ಕೊಡೋ ಜಾಗವನ್ನು ಹುಡುಕಿಕೊಂಡು ಹೋಗುವುದು ಸೂಕ್ತವಲ್ವೇ..ಹಾಗಾಗಿ ಕಾದು ನೋಡುತ್ತೇವೆ,,ಈಗಲೇ ಎಲ್ಲವನ್ನು ನಿರ್ಧರಿಸಲಿಕ್ಕೆ ಆಗೊಲ್ಲ.ವಾರ್ಡ್ ಕಾರ್ಯಕರ್ತರು-ಬೆಂಬಲಿಗರ ಜತೆ ಮಾತನಾಡುತ್ತೇವೆ ಎಂದು ಕೆಲವರು ಹೇಳ್ತಾರೆ.

ಬಿಬಿಎಂಪಿ ಎಲೆಕ್ಷನ್ ಯಾವ್ ಕ್ಷಣದಲ್ಲಿ ಬೇಕಾದ್ರೂ ಘೋಷಣೆಯಾಗಿ ದಿನಾಂಕ ನಿಗಧಿಯಾಗೋ ಸಾಧ್ಯತೆಗಳಿರುವುದರಿಂದ ಬಿಜೆಪಿ ವರಿಷ್ಠರು ಈಗಾಗ್ಲೇ ವಾರ್ಡ್ ಮಟ್ಟದಲ್ಲಿ ಹೊಸ ಮುಖಗಳಿಗೆ ಹುಡುಕಾಟವನ್ನೂ ಶುರು ಮಾಡಿದ್ದಾರಂತೆ.ಹೊಸಬರಿಗೆ ಮೊದಲ ಆಧ್ಯತೆ ನೀಡುವುದರ ಜತೆಗೆ ಅಕ್ರಮ-ಹಗರಣ-ಭ್ರಷ್ಟಾಚಾರವಿಲ್ಲದ ಶುದ್ಧಹಸ್ತದ ಜನಾನುರಾಗಿಗಳ ಹುಡುಕಾಟ ಶುರುವಿಟ್ಟುಕೊಂಡಿದ್ದಾರಂತೆ.

ಒಟ್ಟಿನಲ್ಲಿ ಉತ್ತರ ಪ್ರದೇಶದ ಫಾರ್ಮ್ಯೂಲಾ ಹೊಸಬರಿಗೆ ಅವಕಾಶದ ಬಾಗಿಲನ್ನು ತೆರೆದರೆ,ಮಾಜಿಗಳಿಗೆ ಇರುವ ಅವಕಾಶದ ಬಾಗಿಲನ್ನು ಮುಚ್ಚಿದ ಸನ್ನಿವೇಶ ಸೃಷ್ಟಿಸುತ್ತಿರುವುದು ಮಾತ್ರ ಸುಳ್ಳಲ್ಲ..

Spread the love

Related Articles

Leave a Reply

Your email address will not be published.

Back to top button
Flash News