Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

13,00,000 CRORES SCANDLE IN KRIDL..?! ಕೈ-ಸಮ್ಮಿಶ್ರ ಸರ್ಕಾರ+ ಕೆಆರ್ ಐಡಿಎಲ್ =13,00,000 ಕೋಟಿ ಹಗರಣ..?!

ಬೆಂಗಳೂರು: ಹಗರಣ-ಭ್ರಷ್ಟಾಚಾರ-ಅಕ್ರಮ-ಪರ್ಸಂಟೇಜ್ ಕಾರಣಕ್ಕೆ ಸದಾ ಚರ್ಚೆಯಲ್ಲಿರುವ “ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತ ಅಥವಾ ಕೆಆರ್ ಐಡಿಎಲ್ ಮತ್ತೊಮ್ಮೆ ಸುದ್ದಿಯಲ್ಲಿದೆ.ಒಂದಲ್ಲ ಎರಡಲ್ಲ ಬರೋಬ್ಬರಿ 13,000 ಕೋಟಿ ಹಗರಣದ ಕಾರಣಕ್ಕೆ ಸುದ್ದಿಯಲ್ಲಿರುವ ಪ್ರಕರಣದ ಮೇಲೆ ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್ ಬೆಳಕು ಚೆಲ್ಲಿದ್ದಾರೆ.ಅಷ್ಟೇ ಅಲ್ಲ, ಹಗರಣದ ತನಿಖೆ ಹಿನ್ನಲೆಯಲ್ಲಿ ಸಿಎಂ ಆದಿಯಾಗಿ ಹಲವರಿಗೆ ದೂರು ಸಹ ನೀಡಿದ್ದಾರೆ.

2015-16 ರಿಂದ 2019-20 ರವರೆಗಿನ 05 ವರ್ಷಗಳ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದ KRIDL ನಡೆಸಿರುವ 6,932 ಪುಟಗಳ ಬೃಹತ್ ದಾಖಲೆಗಳನ್ನೊಳಗೊಂಡ ಹಗರಣವನ್ನು  ಎನ್ ಆರ್ ರಮೇಶ್ ಬಿಡುಗಡೆಗೊಳಿಸಿದ್ದಾರೆ .ಸಿದ್ಧರಾಮಯ್ಯ ನೇತೃತ್ವದ ಕೈ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆಆರ್ ಐಡಿಎಲ್ ಗೆ  ವಿವಿಧ ಅನುದಾನಗಳ ಒಟ್ಟು ಮೊತ್ತ ವಾಗಿ 12,943,83,44,615 ರೂ ಬಿಡುಗಡೆಯಾಗಿತ್ತಂತೆ. ಕಾಮಗಾರಿ ಪೂರ್ಣಗೊಂಡಿದೆ ಎಂದ್ಹೇಳಿ “ಉಪ ಗುತ್ತಿಗೆದಾರ”ರಿಗೆ 8,092,56,30,831 ರೂ ಬಿಡುಗಡೆ ಮಾಡಲಾಗಿತ್ತು.

ಸಹಜವಾಗಿ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಿರುವ ಕೆಆರ್ ಐಡಿಎಲ್ ಮಹಾನಗರ ಪ್ರದೇಶದ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳು / ಕಾಮಗಾರಿಗಳನ್ನು ನಿರ್ವಹಿಸುವುದೇ ನಿಯಮ ಬಾಹಿರ.

10/03/2011, 11/03/2011 ಮತ್ತು 17/02/2016 ರಲ್ಲಿ ಹೊರಡಿಸಿರುವ ಅಧಿಕೃತ ಆದೇಶಗಳಲ್ಲಿರುವಂತೆ KRIDL ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ “ಮಹಾಪೌರರು / ಉಪ ಮಹಾಪೌರರ ಅನುದಾನ”ಗಳ ಮೂಲಕ ಕೈಗೊಳ್ಳಲಾಗುವ ಕಾಮಗಾರಿಗಳು ಹಾಗೂ “ತುರ್ತು ಕಾಮಗಾರಿಗಳ”ನ್ನು ಮಾತ್ರವೇ ನಿರ್ವಹಿಸಲು ಅವಕಾಶವಿರುತ್ತದೆ.

ಆ ಪೈಕಿ  “ತುರ್ತು ಕಾಮಗಾರಿಗಳು” ಎಂದರೆ, ಮಳೆ ಹಾನಿ ಅಥವಾ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಅನಾಹುತಗಳನ್ನು ಸರಿ ಪಡಿಸುವ ಕಾರ್ಯಗಳನ್ನು ಹಾಗೂ ಶಾಲಾ / ಕಾಲೇಜು ಕಟ್ಟಡಗಳು / ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾರ್ಯಗಳನ್ನಷ್ಟೇ KRIDL ಸಂಸ್ಥೆಯು ನಿರ್ವಹಿಸಬಹುದಾಗಿರುತ್ತದೆ.ಅಷ್ಟೇ ಅಲ್ಲದೇ KRIDL ಕೆಲವೇ ಬೆರಳೆಣಿಕೆಯಷ್ಟು ಅಧಿಕಾರಿಗಳು / ನೌಕರರನ್ನು ಹೊಂದಿದ್ದು, ತಾಂತ್ರಿಕ ನೈಪುಣ್ಯತೆ ಹೊಂದಿರುವ Engineer ಗಳನ್ನು ಕೂಡ  ಹೊಂದಿರುವುದಿಲ್ಲ.

ಹೀಗಿದ್ದರೂ ಸಹ ಇಲ್ಲಿನ ಅಧಿಕಾರಿಗಳು ತಮ್ಮ ಅತೀವ ಹಣ ಬಾಕತನದಿಂದ ಹಾಗೂ ಪಟ್ಟಭದ್ರ ವಂಚಕ ಜನಪ್ರತಿನಿಧಿಗಳು / ಭ್ರಷ್ಟ ಅಧಿಕಾರಿಗಳ ಲೂಟಿಕೋರತನದ ಸ್ವಾರ್ಥ ಕಾರಣಗಳಿಗಾಗಿ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿಗಳಷ್ಟು ಮೊತ್ತದ ಕಾಮಗಾರಿಗಳನ್ನು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎನ್ನೋದು ರಮೇಶ್ ಆರೋಪ.

 ತನ್ಮೂಲಕ ನಿರ್ವಹಿಸುವ ಪ್ರತಿಯೊಂದು ಕಾಮಗಾರಿಯ ಒಟ್ಟು ಅಂದಾಜು ಮೊತ್ತದ ಶೇ. 11% ರಷ್ಟು ಮೊತ್ತವನ್ನು “ಸೇವಾ ಶುಲ್ಕ” (Service Charge) ರೂಪದಲ್ಲಿ ಪಡೆದುಕೊಳ್ಳುವ ಕಾರ್ಯವನ್ನಷ್ಟೇ KRIDL ಸಂಸ್ಥೆಯು ಮಾಡುತ್ತದೆ.ಇಲ್ಲಿಯವರೆಗೆ KRIDL   ಮೂಲಕ ನಿರ್ವಹಿಸಲಾಗಿರುವ ಬಹುತೇಕ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುವುದನ್ನು ದಾಖಲೆಗಳೇ ಬಟಾಬಯಲು ಮಾಡಿವೆ.

ಅನುಮೋದಿತ ಅಂದಾಜು ಪಟ್ಟಿಯಲ್ಲಿರುವ ನಿರ್ದಿಷ್ಟ ಕಾರ್ಯಗಳ ಅರ್ಧ ಭಾಗದಷ್ಟನ್ನೂ ನಿರ್ವಹಿಸದೆಯೇ ಪೂರ್ಣ ಪ್ರಮಾಣದ Bill ಗಳನ್ನು ಮಾಡಿಸಿಕೊಂಡಿರುವ ಪ್ರಕರಣಗಳು ಶೇ. 50% ರಷ್ಟಾದರೆ, ಇನ್ನುಳಿದ ಶೇ. 50% ರಷ್ಟು ಕಾಮಗಾರಿಗಳನ್ನು ನಿರ್ವಹಿಸದೆಯೇ Bill ಗಳನ್ನು ಮಾಡಿಸಿಕೊಂಡಿರುವ ಕುಖ್ಯಾತಿಯನ್ನು KRIDL ಸಂಸ್ಥೆಯು ಹೊಂದಿದೆ.

2015-16 ರಿಂದ 2020-21 ರವರೆಗಿನ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆಂದು KRIDL ಸಂಸ್ಥೆಗೆ ಕಾನೂನು ಬಾಹಿರವಾಗಿ ವಹಿಸಲಾಗಿರುವ 13,000 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ಉತ್ತಮ ಗುಣಮಟ್ಟದ ಕಾಮಗಾರಿ ಎಂದು ಹೆಸರಿಸಲ್ಪಡುವ ಒಂದೇ ಒಂದು ಕಾಮಗಾರಿಯೂ ಸಹ ನಮಗೆ ಕಾಣ ಸಿಗುವುದಿಲ್ಲ.

ಸಂಸ್ಥೆಗೆ ವಹಿಸಿರುವ  12,943,83,44,615/- ಮೊತ್ತದ ಕಾಮಗಾರಿಗಳ ಪೈಕಿ, ಪ್ರಸ್ತುತ ಪಾಲಿಕೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ನಿರ್ವಹಿಸಲಾಗುತ್ತಿದ್ದು ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿರುವ ಸುಮಾರು 850 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಹೊರತುಪಡಿಸಿ, ಇನ್ನುಳಿದ ಸುಮಾರು  12,150 ಕೋಟಿ ರೂ. ಮೊತ್ತದ ಕಾಮಗಾರಿಗಳ ಪೈಕಿ ಶೇ. 50% ರಷ್ಟು ಮೊತ್ತವನ್ನು ಕಾಮಗಾರಿಗಳನ್ನು ನಿರ್ವಹಿಸದೆಯೇ ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ ಎಂಬುದು ರಮೇಶ್ ಅವರ  ಗಂಭೀರ ಆರೋಪ.

ಇನ್ನುಳಿದ ಶೇ. 50% ರಷ್ಟು ಮೊತ್ತದ ಕಾಮಗಾರಿಗಳನ್ನು ಅವುಗಳ ಅರ್ಧದಷ್ಟೂ ಪ್ರಮಾಣದಲ್ಲಿ ಪೂರ್ಣಗೊಳಿಸದೆಯೇ Bill ಗಳನ್ನು ಮಾಡಿಸಿಕೊಳ್ಳಲಾಗಿದೆ. ಇದೇ ರೀತಿ ಸಾರ್ವಜನಿಕರ ತೆರಿಗೆ ಹಣವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಿಂದು ತೇಗಲೆಂದೇ KRIDL ಸಂಸ್ಥೆಯ ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲವು ವಂಚಕ ಜನ ಪ್ರತಿನಿಧಿಗಳು ಅತ್ಯಂತ ವ್ಯವಸ್ಥಿತವಾಗಿ ರೂಪಿಸುವ ಷಡ್ಯಂತ್ರದಿಂದಲೇ – ನಿಯಮಾನುಸಾರ e – procurement ವಿಧಾನದಲ್ಲಿ ಟೆಂಡರ್ ಗಳ ಮೂಲಕ ನಿರ್ವಹಿಸಬೇಕಾದ ಕಾಮಗಾರಿಗಳೆಲ್ಲವೂ KRIDL ಸಂಸ್ಥೆಯ ಪಾಲಾಗುತ್ತಿರುವುದು ಅಕ್ಷರಶಃ ಸತ್ಯ ಎಂಬುದು ರಮೇಶ್ ಅವರ  ಆರೋಪ.

ಕೇವಲ ಗಾಂಧಿನಗರ ವಿಧಾನಸಭಾ ಕ್ಷೇತ್ರವೊಂದರಲ್ಲೇ KRIDL ಸಂಸ್ಥೆಯು ಕಾಮಗಾರಿಗಳನ್ನು ನಿರ್ವಹಿಸದೆಯೇ ಉಪ ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಹತ್ತಾರು ಕೋಟಿ ರೂ. ಗಳನ್ನು ವಂಚಿಸಿರುವ ಸಂಬಂಧ ವಿವಿಧ ತನಿಖಾ ಸಂಸ್ಥೆಗಳಲ್ಲಿ 13 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು FIR ಗಳು ದಾಖಲಾಗಿವೆ.KRIDL ಸಂಸ್ಥೆಯ 13,000 ಕೋಟಿ ಮೊತ್ತದ ಈ ಬೃಹತ್ ಹಗರಣವನ್ನು CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು N. R. ರಮೇಶ್  ಆಗ್ರಹಿಸಿದ್ದಾರೆ.

ಈ ಬೃಹತ್ ಹಗರಣದಲ್ಲಿ ಭಾಗಿಗಳಾಗಿರುವ KRIDL ಸಂಸ್ಥೆಯ 06 IFS ಅಧಿಕಾರಿಗಳೂ ಸೇರಿದಂತೆ 62 ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ KRIDL ಸಂಸ್ಥೆಯಿಂದ ಉಪ ಗುತ್ತಿಗೆಯನ್ನು Group Leader ಗಳ ಹೆಸರಿನಲ್ಲಿ ಪಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಎಲ್ಲಾ ಉಪ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪಾಲಿಕೆಯ ಮುಖ್ಯ ಆಯುಕ್ತರಿಗೆ ಆದೇಶಿಸುವಂತೆ ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News