ಜಾಗತಿಕ ಮಟ್ಟದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಅಬ್ಬರ ಇಳಿಮುಖ ಆಗುತ್ತಿದ್ದಂತೆ ಇಸ್ರೇಲ್ ನಲ್ಲಿ ಹೊಸದೊಂದು ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮತ್ತೆ ಆತಂಕ ಶುರುವಾಗಿದೆ.
ಇಸ್ರೇಲ್ ಆರೋಗ್ಯ ಸಚಿವಾಲಯ ಈ ವಿಷಯ ದೃಢಪಡಿಸಿದ್ದು, ವಿದೇಶದಿಂದ ಬಂದ ಇಬ್ಬರು ಪ್ರಯಾಣಿಕರಲ್ಲಿ ಹೊಸ ತಳಿಯ ಎರಡು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದೆ.
ಒಮಿಕ್ರಾನ್ ಮತ್ತು ಕೊರೊನಾ ವೈರಸ್ ಎರಡು ಮಿಶ್ರಣವಾಗಿ ಹೊಸ ತಳಿ ಪತ್ತೆಯಾಗಿದ್ದು, ಇದು ಅಪಾಯಕಾರಿಯೋ ಅಥವಾ ಸಾಧಾರಣವಾಗಿ ಬಂದು ಹೋಗುವ ಸೋಂಕೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಗುಣಲಕ್ಷಣಗಳು
ಹೊಸ ತಳಿಯ ಕೊರೊನಾ ವೈರಸ್ ಕಂಡು ಬಂದರೆ ಸಣ್ಣದಾಗಿ ಜ್ವರ, ಮಾಂಸಖಂಡಗಳ ನೋವು, ತಲೆನೋವು, ಸುಸ್ತು ಕಾಣಿಸಿಕೊಳ್ಳಲಿದೆ ಎಂದು ತಜ್ಞರು ತಿಳಿಸಿದ್ದಾರೆ.