ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐತಿಹಾಸಿಕ ಜೆರ್ಸಿ 7 ಆಯ್ಕೆ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಮುಂಬೈನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ನಂಬಿಕೆ ಅಥವಾ ಮೂಢನಂಬಿಕೆಯಿಂದಾಗಿ ಜೆರ್ಸಿ ನಂ.7 ಅನ್ನು ಆಯ್ಕೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2007ರಲ್ಲಿ ಭಾರತ ತಂಡದ ಜೆರ್ಸಿ ನಂಬರ್ ಆಯ್ಕೆ ವಿಷಯಕ್ಕೆ ಬಂದಾಗ ನಾನು ಸಹಜವಾಗಿ 7 ಅನ್ನು ಆಯ್ಕೆ ಮಾಡಿಕೊಂಡೆ. ಇದಕ್ಕೆ ಕಾರಣ ನಾನು ಜುಲೈ 7ರಂದು ಜನಿಸಿದ್ದು. ಅಂದರೆ 7ನೇ ತಿಂಗಳು, 7ನೇ ತಾರೀಖು. ಆದ್ದರಿಂದ ನನಗೆ ಒಳ್ಳೆಯದಾಗಬಹುದು ಎಂದು ಜನ್ಮ ದಿನಾಂಕ ಆಧರಿಸಿ 7 ಅನ್ನು ಆಯ್ಕೆ ಮಾಡಿಕೊಂಡೆ ಎಂದು ಧೋನಿ ವಿವರಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಜೆರ್ಸಿ ನಂ.7 ಅದೃಷ್ಟ ತರುತ್ತೆ ಎಂದು ಮಾತನಾಡುವುದನ್ನು ಕೇಳಿದ್ದೇನೆ. ಆದರೆ ನಾನು ಅದೃಷ್ಟ ನಂಬಿಕೊಂಡು ಈ ಸಂಖ್ಯೆ ಆಯ್ಕೆ ಮಾಡಲಿಲ್ಲ. ಇದನ್ನು ಹೇಳಬೇಕು ಅಂದರೆ ನಾನು ಹುಟ್ಟಿದ ವರ್ಷ 81 8ರಲ್ಲಿ 1 ಕಳೆದರೆ 7 ಎಂದು ಅವರು ಸ್ಪಷ್ಟಪಡಿಸಿದರು.
ವಿಶ್ವದ ಅಗ್ರಮಾನ್ಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಜೆರ್ಸಿ ನಂ.7 ಆಗಿದೆ. ಆದರೆ ಇದಕ್ಕೂ ನನ್ನ ಜೆರ್ಸಿ ನಂಬರ್ ಆಯ್ಕೆಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು.