ಪೋಲೆಂಡ್ ಗೆ ಕ್ಷಿಪಣಿ ನಿರೋಧಕ ಕಳುಹಿಸಿದ ಅಮೆರಿಕ UK to send missile defense system to Poland amid Russia-Ukraine war

ಪೋಲೆಂಡ್ ಗೆ ಕ್ಷಿಪಣಿ ನಿರೋಧಕ ಕಳುಹಿಸಿದ ಅಮೆರಿಕ

0

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಉಕ್ರೇನ್ ಪಕ್ಕದ ರಾಷ್ಟ್ರವಾದ ಪೋಲೆಂಡ್ ಗೆ ಕ್ಷಿಪಣಿ ನಿರೋಧಕಗಳನ್ನು ಕಳುಹಿಸಿಕೊಟ್ಟಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ 22 ದಿನಗಳನ್ನು ಪೂರೈಸಿದ್ದು, ಯುದ್ಧ ನಿಲ್ಲುವ ಸೂಚನೆ ದೊರೆಯುತ್ತಿಲ್ಲ. ಇದುವರೆಗೆ 7000 ಯೋಧರು ಮೃತಪಟ್ಟಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಹೇಳಿದೆ.

ಉಕ್ರೇನ್ ಮೇಲೆ ಸತತ ಕ್ಷಿಪಣಿ ದಾಳಿ ನಡೆಸುತ್ತಿರುವ ರಷ್ಯಾ, ಇದೀಗ ತನ್ನ ಬತ್ತಳಿಕೆಯಿಂದ ಹೊಸ ಹೊಸ ಅಸ್ತ್ರಗಳನ್ನು ಹೊರತೆಗೆಯುತ್ತಿದೆ. ಇದರಿಂದ ಪಕ್ಕದ ರಾಷ್ಟ್ರಗಳಿಗೂ ಹಾನಿಯಾಗುವ ಸಾಧ್ಯತೆ ಇದ್ದು, ಅಮೆರಿಕ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವುದಾಗಿ ಘೋಷಿಸಿದೆ.

Spread the love
Leave A Reply

Your email address will not be published.

Flash News