Breakinglock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿರಾಜ್ಯ-ರಾಜಧಾನಿ

SHOCKING…MORE ACCIDENTS-DEATHS IN LOCKDOWN:CAG REPORT REVEALS….ಲಾಕ್ ಡೌನ್ ವೇಳೆಯಲ್ಲೂ ಹೆಚ್ಚು ಅಪಘಾತ-ಸಾವು :ಸಿಎಜಿ ವರದಿಯಲ್ಲಿ ಅಘಾತಕಾರಿ ಸಂಗತಿ ಬಯಲು

ಬೆಂಗಳೂರು: ಲಾಕ್ ಡೌನ್ ವೇಳೆ ರಾಜ್ಯದಲ್ಲಿ ರಸ್ತೆ ಅಪಘಾತ ಹಾಗೂ ಸಾವಿನ ಪ್ರಕರಣಗಳಲ್ಲಿ ಇಳಿಕೆ ಆಗಿರಬೇಕಲ್ಲ..ಸರ್ವೇಸಾಮಾನ್ಯವಾಗಿ ಇದಕ್ಕೆ ಹೌದು..ಖಂಡಿತಾ ಎನ್ನುವ ಉತ್ತರ ಸಿಗುತ್ತೆಂದು ನಿರೀಕ್ಷಿಸುವವರೇ ಹೆಚ್ಚು.ಆದರೆ ನಮ್ಮ ಊಹೆ ಖಂಡಿತಾ ತಪ್ಪು..ಇದನ್ನು ಹೇಳುತ್ತಿರುವುದು ಯಾವುದೇ ಸರ್ವೆಗಳಲ್ಲ..ಬದಲಿಗೆ ಭಾರತದ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವರದಿಯೇ ಇಂತದ್ದೊಂದು ಅಚ್ಚರಿ ಹಾಗೂ ಆತಂಕದ ಸಂಗತಿಯನ್ನು ಸಾರಿ ಹೇಳುತ್ತಿದೆ.

ಸಿಎಜಿ ವರದಿಯಲ್ಲಿ ದಾಖಲಾಗಿರುವ ಅಪಘಾತಗಳು-ಹಿಟ್ ಅಂಡ್ ರನ್ ಪ್ರಕರಣಗಳು ಹಾಗು ಸಾವಿನ ಪ್ರಕರಣಗಳ ಅಂಕಿಅಂಶಗಳ ಸಮಗ್ರ ಮಾಹಿತಿ ಇಂತಿದೆ.

2016 ರಿಂದ 2020ರ ಅವಧಿಯಲ್ಲಿ 2,47,137 ಅಪಘಾತಗಳು ಸಂಭವಿಸಿವೆ.ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 5476.ಅತೀ ಹೆಚ್ಚಿನ ಅಪಘಾತಗಳು 2016 ರಲ್ಲಿ (44041) ಸಂಭವಿಸಿವೆ.ವಿಚಿತ್ರ ಎಂದರೆ ಲಾಕ್ ಡೌನ್ ಜಾರಿಯಾದ 2019 ಮತ್ತು 2020ರಲ್ಲಿಯೂ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಎನ್ನುವಷ್ಟೇನೂ ಇಳಿಕೆಯಾಗಿಲ್ಲ.2019 ರಲ್ಲಿ 40658 ರಷ್ಟು ಹಾಗೂ 2020 ರಲ್ಲಿ 34178 ರಷ್ಟು ಅಪಘಾತ ಸಂಭವಿಸಿವೆ,

2019 ರಲ್ಲಿ 803 ಹಾಗೂ 2020 ರಲ್ಲಿ 822 ಜನ ಸಾವನ್ನಪ್ಪಿದ್ದಾರೆ.ಲಾಕ್ ಡೌನ್ ಜಾರಿಯಾಗಿರದಿದ್ದ 2018 ರಲ್ಲಿ 798 ರಷ್ಟು ಅಪಘಾತಗಳಾಗಿತ್ತು.ಆದರೆ ಲಾಕ್ ಡೌನ್ ಜಾರಿಯಾದ 2010 ಮತ್ತು 2020 ರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿವೆ ಎನ್ನುವುದು ಸಿಎಜಿ ವರದಿಯಲ್ಲೇ ಉಲ್ಲೇಖವಾಗಿದೆ,. ಕಳೆದ ಐದು ವರ್ಷಗಳಲ್ಲಿ ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 161(2)ರ ಪ್ರಕಾರ ದಾಖಲಾಗಿರುವ ಗುದ್ದೋಡು ಅಥವಾ ಹಿಟ್ ಅಂಡ್ ರನ್ ಪ್ರಕರಣಗಳು ಕೆಳಕಂಡಂತಿವೆ.

 2017 ರಲ್ಲಿ 42542 ರಸ್ತೆ ಅಪಘಾತಗಳು ಸಂಭವಿಸಿದ್ದರೆ 2911 ಹಿಟ್ ಅಂಡ್ ರನ್ ಪ್ರಕರಣಗಳಾಗಿದ್ವು.ಇದರಲ್ಲಿ 853 ಸಾವು ಸಂಭವಿಸಿದ್ದರೆ 3152 ಜನ ಗಾಯಗೊಂಡಿದ್ದರು.

ಒಟ್ಟಾರೆ ಅಪಘಾತಗಳಲ್ಲಿ ಶೇಕಡಾ 6.84 ರಷ್ಟು ಹಿಟ್ ಅಂಡ್ ರನ್ ಪ್ರಕರಣಗಳಾಗಿದ್ದವು.2018 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳು 41707 ರಷ್ಟಾಗಿದ್ದರೆ ಇದರಲ್ಲಿ 2052 ಪ್ರಕರಣಗಳು ಹಿಟ್ ಅಂಡ್ ರನ್ ಆಗಿದ್ವು.ಈ ಅಪಘಾತಗಳಲ್ಲಿ ಸಾವನ್ನಪ್ಪಿದವರು 798 ಗಾಯಗೊಂಡವರು 1832 ರಷ್ಟಾದ ರೆ ಹಿಟ್ ಅಂಡ್ ರನ್ ಪ್ರಮಾಣ ಶೇಕಡಾ 4.92 ರಷ್ಟಾಗಿತ್ತೆನ್ನುತ್ತದೆ ಸರ್ವೆ.

ಇನ್ನು 2019 ರಲ್ಲಿ 40658 ಅಪಘಾತಗಳು ಸಂಭವಿಸ್ರೆ ಇದರಲ್ಲಿ 1907 ರಷ್ಟು ಪ್ರಕರಣಗಳು ಹಿಟ್ ಅಂಡ್ ರನ್ ದ್ದಾಗಿದ್ವು.ಸಾವನ್ನಪ್ಪಿದವರು 803 ಜನರಾದರೆ ಗಾಯಗೊಂಡವರು 1635 ಅಂದ್ಹಾಗೆ ಹಿಟ್ ಅಂಡ್ ರನ್ ಪ್ರಮಾಣ ಶೇಕಡಾ 4.62 ರಷ್ಟು ಎನ್ನುತ್ತದೆ ಸಮೀಕ್ಷೆ.

ಅದೇ ರೀತಿ 2020 ರಲ್ಲಿ 34178 ರಷ್ಟು ಅಪಘಾತಗಳು ಸಂಭವಿಸಿದ್ವು.2193 ರಷ್ಟು ಹಿಟ್ ಅಂಡ್ ರನ್ ದ್ದಾಗಿದ್ವು.822 ಜನ ಸಾವನ್ನಪ್ಪಿದ್ರು.1786 ಜನ ಗಾಯಗೊಂಡ್ರೆ ಹಿಟ್ ಅಂಡ್ ರನ್ ನ ಪ್ರಮಾಣ ಶೇಕಡಾ 6.42 ರಷ್ಟಿತ್ತೆನ್ನುತ್ತದೆ ಸಿಎಜಿ ರಿಪೋರ್ಟ್.
Spread the love

Related Articles

Leave a Reply

Your email address will not be published.

Back to top button
Flash News