Breakingಸಿನೆಮಾ ಹಂಗಾಮ

RRR ಕಾರ್ಯಕ್ರಮದಲ್ಲಿ ಪೊಲೀಸರ ಮೇಲೆ ಚಪ್ಪಲಿ, ಬಾಟಲಿ ಎಸೆದ ಅಭಿಮಾನಿಗಳು! fans throw rrr pre relese programme

ಭಾರೀ ನಿರೀಕ್ಷೆ ಮೂಡಿಸಿರುವ ರಾಜಮೌಳಿ ನಿರ್ದೆಶನದ ಆರ್ ಆರ್ ಆರ್ ಚಿತ್ರದ ಪ್ರೀ ರೀಲಿಸ್ ಇವೆಂಟ್ ವೇಳೆ ಅಭಿಮಾನಿಗಳು ಪೊಲೀಸರ ಮೇಲೆ ಚಪ್ಪಲಿ, ಬಾಟಲಿ ಎಸೆದು ಅತಿರೇಕದ ವರ್ತನೆ ತೋರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮುಂದಿನ ವಾರ ಅಂದರೆ ಮಾರ್ಚ್ 25 ರಂದು ವಿಶ್ವದಾದ್ಯಂತ ಆರ್ ಆರ್ ಆರ್ ಚಿತ್ರ ತೆರೆಗೆ ಬರಲಿದೆ. ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಈ ಚಿತ್ರ ಹಲವಾರು ಬಾರಿ ಮುಂದೂಡಿಕೆ ನಂತರ ಮುಂದಿನ ವಾರ ಬಿಡುಗಡೆ ಆಗುವುದು ಖಚಿತವಾಗಿದೆ.

ಕಾರ್ಯಕ್ರಮದ ಆರಂಭದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಆರ್ಆರ್ಆರ್ ಚಿತ್ರತಂಡ ಹಾಡಿನ ಮೂಲಕ ನಮನ ಸಲ್ಲಿಸಿತು. ಅಪ್ಪು ನೆನೆದು ನೆರೆದಿದ್ದವರು ಭಾವುಕರಾದ್ರು. ಬೃಹತ್ ವೇದಿಕೆಯಲ್ಲಿ ನಟ ರಾಮ್ಚರಣ್, ನಟ ಜ್ಯೂನಿಯರ್ ಎನ್ಟಿಆರ್ಸೇರಿದಂತೆ ಕಲಾವಿದರು ಚಿತ್ರದ ಹಾಡುಗಳಿಗೆ ಸ್ಪೆಪ್ಸ್ ಹಾಕಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ನಾ ಮುಂದು ತಾ ಮುಂದು ಅಂತ ಒಬ್ಬರ ಮೇಲೊಬ್ಬರು ಮುನ್ನುಗ್ಗಿದರು. ಬ್ಯಾರಿಕೇಡ್ಗಳನ್ನು ಮುರಿದು ಹಾಕಿದರು.

ಅಭಿಮಾನಿಗಳು ಕೈಗೆ ಸಿಕ್ಕ ವಸ್ತುಗಳು, ಚೇರ್ಗಳನ್ನು ಬಿಸಾಡಿ ಪುಡಿ ಪುಡಿ ಮಾಡಿದರು. ಪೊಲೀಸರ ಮೇಲೆಯೇ ಬಾಟಲಿ, ಚಪ್ಪಲಿ ತೂರಿ ಅಸಭ್ಯ ವರ್ತನೆ ತೋರಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾದರು.

ಕಾರ್ಯಕ್ರಮಲ್ಲಿ ಅಭಿಮಾನದ ಸಾಗರವೇ ಹರಿದು ಬಂದಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ನಟ ಶಿವಣ್ಣ, ಸಚಿವ ಸುಧಾಕರ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Spread the love

Related Articles

Leave a Reply

Your email address will not be published.

Back to top button
Flash News