Breakingಸಿನೆಮಾ ಹಂಗಾಮ

ಜೇಮ್ಸ್ ಚಿತ್ರಕ್ಕೆ ಕಂಟಕ, ಕಾಶ್ಮೀರ್ ಫೈಲ್ಸ್ ಹಾಕುವಂತೆ ರಾಜಕೀಯ ಒತ್ತಡ! james in trouble

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಜೇಮ್ಸ್ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಬರುತ್ತಿದ್ದರೂ ರಾಜಕೀಯ ಪ್ರಭಾವದಿಂದ ಸಂಕಷ್ಟಕ್ಕೆ ಸಿಲುಕಿದೆ.

ಮಾರ್ಚ್ 17ರಂದು ಪುನೀತ್ ಜನ್ಮದಿನದಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದ ಜೇಮ್ಸ್ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಥಿಯೇಟರ್ ಗಳಿಂದ ಎತ್ತಂಗಡಿ ಮಾಡುವಂತೆ ಒತ್ತಡಗಳು ಬರುತ್ತಿವೆ.

ಜೇಮ್ಸ್ ಚಿತ್ರದ ನಿರ್ಮಾಪಕ ಹಾಗೂ ವಿತರಕರೂ ಆಗಿರುವ ಕಿಶೋತ್ ಪತ್ತಿಕೊಂಡ ಅವರಿಗೆ ಕರೆ ಮಾಡಿ ಥಿಯೇಟರ್ ಗಳಿಂದ ಜೇಮ್ಸ್ ಚಿತ್ರ ತೆಗೆಯುವಂತೆ ಒತ್ತಡಗಳು ಬರುತ್ತಿವೆ.

ಜೇಮ್ಸ್ ಚಿತ್ರ ತೆಗೆದು ರಾಜಕೀಯ ಬೆಂಬಲ ಪಡೆದಿರುವ ಕಾಶ್ಮೀರಿ ಫೈಲ್ಸ್ ಚಿತ್ರ ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಶಾಸಕರೊಬ್ಬರು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿದೆ.

ಜೇಮ್ಸ್ ಚಿತ್ರ ಪುನೀತ್ ಅಭಿನಯದ ಕೊನೆಯ ಚಿತ್ರವಾಗಿದ್ದು, ಅಭಿಮಾನಿಗಳಿಗಾಗಿ ಒಂದು ವಾರ ರಾಜ್ಯದಲ್ಲಿ ಇತರೆ ಯಾವುದೇ ಚಿತ್ರಗಳಿಗೆ ಅವಕಾಶ ನೀಡಲಿರಲಿಲ್ಲ. ಅಲ್ಲದೇ ಚಿತ್ರಕ್ಕೆ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದರಿಂದ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆಯುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News