Breakingದೇಶ-ವಿದೇಶ

ಸತತ 2ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ! petrol, diesel hike second day

ದೇಶದಲ್ಲಿ ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ಏರಿಕೆಯಾಗದ ಪೆಟ್ರೋಲ್ ಮತ್ತು ಡೀಸೆಲ್ ದರ ಮೊದಲ ಬಾರಿ ನಿನ್ನೆ 80 ಪೈಸೆ ಹೆಚ್ಚಿಸಲಾಗಿದ್ದು, ಇಂದು ಕೂಡ 80 ಪೈಸೆ ಹೆಚ್ಚಿಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 102.26 ರೂ. ಹಾಗೂ ಡೀಸೆಲ್ ಲೀಟರ್ ಗೆ 86.58 ರೂ.ಗೆ ಜಿಗಿತ ಕಂಡಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 111.67 ರೂ. ಹಾಗೂ ಲೀಟರ್ ಡೀಸೆಲ್ ದರ 95.85 ರೂ. ಇದೆ.  ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.91 ರೂ.  ಹಾಗೂ ಲೀಟರ್ ಡೀಸೆಲ್ ದರ 92.95 ರೂ ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.34 ಮತ್ತು ಡೀಸೆಲ್ 91.42, ಚೆನ್ನೈನಲ್ಲಿ ಪೆಟ್ರೋಲ್ ದರ 102.91, ಡೀಸೆಲ್ ದರ 92.95 ರೂ.ಗೆ ಏರಿಕೆಯಾಗಿದೆ.

ನವೆಂಬರ್ 2ರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ. ಪಂಚ ರಾಜ್ಯಗಳ ಚುನಾವಣೆ ಬಳಿಕ ದರ ಏರಿಕೆಯ ನಿರೀಕ್ಷೆ ಇತ್ತು. ಕಳೆದ ವರ್ಷ ನವೆಂಬರ್‍ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ರಷ್ಯಾ, ಉಕ್ರೇನ್ ನಡುವಿನ ಸಂಘರ್ಷದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಬಾರಿ ಏರಿಕೆ ಕಂಡಿದ್ದು ಈಗ ಭಾರತದ ಮೇಲೂ ಪರಿಣಾಮ ಬಿದ್ದಿದೆ.

Spread the love

Related Articles

Leave a Reply

Your email address will not be published.

Back to top button
Flash News