Breakingರಾಜಕೀಯರಾಜ್ಯ-ರಾಜಧಾನಿ

ಹಿರಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ವಿವಾದಾತ್ಮಕ ಹೇಳಿಕೆಗೆ ಭಾರೀ ಆಕ್ರೋಶ! hiremagaluru kannan contravery statement on hijab row

ಸ್ವಚ್ಛ ಕನ್ನಡದಲ್ಲಿ ಮಾತನಾಡುವ ಹಿರಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಹಿಜಾಬ್ ವಿವಾದದ ತೀರ್ಪಿನ ಹಿನ್ನೆಲೆಯಲ್ಲಿ ಆಡಿರುವ ಮಾತುಗಳು ವಿವಾದಕ್ಕೆ ತಿರುಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ರಂಗಾಯಣ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಹಿರೇಮಗಳೂರು ಕಣ್ಣನ್ ಹಿಜಾಬ್ ವಿವಾದದ ಕುರಿತು ಕೀಳು ಮಟ್ಟದ ಭಾಷೆ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ.

ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್‌ ತೀರ್ಪು ನೀಡಿದೆ. ಶಾಲಾ– ಕಾಲೇಜುಗಳಿಂದ ಹಿಜಾಬ್‌ ಹೊರಟುಹೋಗಿದೆ. ಇನ್ಮುಂದೆ ಶಾಲೆಗೆ ಹ್ಯಾಗೆ ಬರಬೇಕು ಎಂದು ಹೇಳಬೇಕು; ಮುಖ ಮುಚ್ಕೊಂಡು ಬರಬೇಡ, ಮುಚ್ಕೊಂಡು ಬಾ. ಏನು ಭಯಾ ರೀ ಮಾತಾಡೋಕೆ? ಡಾಕ್ಟ್ರ ಹತ್ರ ಹೋದ್ರೆ ಎಲ್ಲ ಬಿಚ್ಚಿ ತೋರಿಸ್ತೀರಿ. ಮಾತಾಡಕೆ ಯಾಕೆ ಹೆದರಬೇಕು ಎಂದು ಕೇಳಿದ್ದಾರೆ.

ಹಿರೇಮಗಳೂರು ಮಾತಿಗೆ ಚಿಂತಕರು, ವಿಮರ್ಶಕರು, ಲೇಖಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು ಎಂದು ಲೇಖಕ ಶಶಿಧರ ಹೆಮ್ಮಾಡಿ ಪ್ರಶ್ನಿಸಿದ್ದಾರೆ.

ವಿಮರ್ಶಕ ರಹಮತ್ ತರೀಕೆರೆ ವಿಷಾದಿಸಿದ್ದು, ಕಣ್ಣನ್‌ ಅವರು, ಹಿಜಾಬ್‌ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾದ ಶಬ್ದ ಬಳಸಿದ ಬಗ್ಗೆ ಓದಿದೆ. ಅವರಿಗೂ ಹೆಣ್ಣು ಮಕ್ಕಳು ಇರಬೇಕು. ಪ್ರಶ್ನೆಯೆಂದರೆ, ಎಲ್ಲಿಂದ ಹುಟ್ಟುತ್ತಿದೆ ಈ ಅಮಾನುಷ ಕಿಲುಬು, ಕ್ಷುದ್ರತೆ? ಕಲೆ ನುಡಿಯನ್ನು ಸಂವೇದನಶೀಲಗೊಳಿಸಬೇಕು. ಬದಲಿಗೆ ಮಲಿನಗೊಳಿಸುತ್ತಿದೆ’ ಎಂದು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News