200 ಕೋಟಿ ದಾಟಿದ ಕಾಶ್ಮೀರಿ ಫೈಲ್ಸ್ ಗಳಿಸಿ ದಾಖಲೆ!! Vivek Agnihotri’s The Kashmir Files crosses Rs 200 crore, shatters records

200 ಕೋಟಿ ದಾಟಿದ ಕಾಶ್ಮೀರಿ ಫೈಲ್ಸ್ ಗಳಿಸಿ ದಾಖಲೆ!!

0

ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿ, ಅನುಪಮ್ ಖೇರ್ ನಟಿಸಿರುವ ಕಾಶ್ಮೀರ್ ಫೈಲ್ಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಟ ಮುಂದುವರಿಸಿದ್ದು, 200 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ.

ಅತ್ಯಂತ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಬಿಡುಗಡೆ ಆದ 2 ವಾರದಲ್ಲೇ 200 ಕೋಟಿ ರೂ. ಸಂಗ್ರಹಿಸಿದೆ.

1990ರಲ್ಲಿ ವಲಸೆ ವೇಳೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತ ವಿವಾದಾತ್ಮಕ ಚಿತ್ರ ಕಾಶ್ಮೀರಿ ಫೈಲ್ಸ್ ಚಿತ್ರ ಮಾರ್ಚ್ 11ರಂದು ಬಿಡುಗಡೆ ಆಗಿದ್ದು, 9 ದಿನದಲ್ಲಿ 141 ಕೋಟಿ ಬಾಚಿಕೊಂಡಿದ್ದು, ಇದೀಗ 200 ಕೋಟಿ ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ.

ಬಿಡುಗಡೆ ಆದ ಮೊದಲ ದಿನಕ್ಕಿಂತ ಎರಡನೇ ವೀಕೆಂಡ್ ಆದ ಶನಿವಾರ 24.5 ಕೋಟಿ ರೂ. ಬಾಚಿಕೊಂಡಿದೆ. ಇದು ಕಳೆದ 10ದಿನಗಳಲ್ಲೇ ಗರಿಷ್ಠ ಎನ್ನಲಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳು ತೆರಿಗೆ ವಿನಾಯಿತಿ ಘೋಷಿಸಿದ್ದೂ ಅಲ್ಲದೇ ಸಿನಿಮಾ ವೀಕ್ಷಿಸುವಂತೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ.

Spread the love
Leave A Reply

Your email address will not be published.

Flash News