153 ಥಿಯೇಟರ್ ಗಳಿಂದ ಜೇಮ್ಸ್ ಎತ್ತಂಗಡಿ: ಶಿವಣ್ಣ ಗರಂ james remove from 153 theater

153 ಥಿಯೇಟರ್ ಗಳಿಂದ ಜೇಮ್ಸ್ ಎತ್ತಂಗಡಿ: ಶಿವಣ್ಣ ಗರಂ

0

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರ ಎತ್ತಂಗಡಿ ಮಾಡುತ್ತಿರುವುದರ ವಿರುದ್ಧ ಅಣ್ಣ ಶಿವರಾಜ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.

ಪುನೀತ್ ಅಭಿನಯದ ಜೇಮ್ಸ್ ಚಿತ್ರವನ್ನು ಕಳೆದ ವಾರ ಬಿಡುಗಡೆ ಆಗಿದ್ದು 410 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಆದರೆ ಇದೀಗ ಅನ್ಯ ಭಾಷೆಗಳ ಚಿತ್ರಗಳ ಒತ್ತಡದಿಂದ 153 ಥಿಯೇಟರ್ ಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

410 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಜೇಮ್ಸ್ ಶುಕ್ರವಾರದಿಂದ 240 ಥಿಯೇಟರ್ ಗಳಿಗೆ ಕುಸಿತ ಕಾಣುವ ಸಾಧ್ಯತೆ ಇದೆ. ಇದಕ್ಕೆ ಪರಭಾಷಾ ಚಿತ್ರಗಳಾದ ಕಾಶ್ಮೀರಿ ಫೈಲ್ಸ್ ಮತ್ತು ಆರ್ ಆರ್ ಆರ್ ಚಿತ್ರದ ಬಿಡುಗಡೆಗೆ ಹೆಚ್ಚಿದ ಒತ್ತಡ ಎನ್ನಲಾಗಿದೆ.

ಆರ್ ಆರ್ ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಸ್ವತಃ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದರು. ಆದರೆ ಈ ಚಿತ್ರ ಕರ್ನಾಟಕವೊಂದರಲ್ಲೇ 450 ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರ ಬಹುತೇಕ ಸೋಲ್ಡ್ ಔಟ್ ಆಗಿದೆ ಎಂದು ಹೇಳಲಾಗಿದೆ.

Spread the love
Leave A Reply

Your email address will not be published.

Flash News