BreakingMoreScrollTop NewsUncategorizedಕ್ರೈಮ್ /ಕೋರ್ಟ್ಫೋಟೋ ಗ್ಯಾಲರಿರಾಜಕೀಯರಾಜ್ಯ-ರಾಜಧಾನಿ

FROM MONDAY BANGLORE UNIVERSITY BUND…BUND..!? ಸೋಮವಾರದಿಂದ ಬೆಂಗಳೂರು ಯೂನಿವರ್ಸಿಟಿ ಬಂದ್.!! ಬಂದ್.!!.

ಬೆಂಗಳೂರು:ಒಡೆಯನಿಲ್ಲದ ಮನೆಯಂತಾಗಿರುವ ಬೆಂಗಳೂರು ವಿವಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸುತ್ತಿದೆ ಎನಿಸುತ್ತಿದೆ.ಕುಲಪತಿ ಹುದ್ದೆ ಖಾಲಿಯಾಗಿ 10 ದಿನಗಳಾದ್ರೂ ಆ ಹುದ್ದೆಗೆ ಸಮರ್ಥರನ್ನು ನೇಮಕ ಮಾಡದೆ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿರುವ ಉಪನ್ಯಾ ಸಕರು ಇನ್ನೆರೆಡು ದಿನಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡದಿದ್ದರೆ  ಯೂನಿವರ್ಸಿಟಿಯನ್ನೇ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರೊ.ಕೆ.ಆರ್. ವೇಣುಗೋಪಾಲ್ ಅವರನ್ನು ಕುಲಪತಿಗಳ ಹುದ್ದೆಯಿಂದ ಹೈ ಕೋರ್ಟ್ ಅನೂರ್ಜಿತಗೊಳಿಸಿ ಹತ್ತಿರತ್ತಿರ ವಾರವೇ ಕಳೆದೋಗಿದೆ.10 ದಿನಗಳಾದ್ರೂ ವಿವಿಗೆ ಕುಲಪತಿಗಳ ನಿಯೋಜನೆಯಾಗಿಲ್ಲ.ಹುದ್ದೆ ಖಾಲಿಯಾಗಿ 10 ದಿನ ಕಳೆಯುತ್ತಿದೆ.

ಸರ್ಕಾರಕ್ಕಾಗಲಿ, ಉನ್ನತ ಶಿಕ್ಷಣ ಇಲಾಖೆಗಾಗಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕೆನ್ನುವ ಜವಾಬ್ದಾರಿ ಇದ್ದಂತಿಲ್ಲ. ಹಾಗೇನಾದ್ರೂ ಇದ್ದಿದ್ದರೆ ವೇಣುಗೋಪಾಲ್ ನಿರ್ಗಮನದ ಬೆನ್ನಲ್ಲೇ ಎಲ್ಲಾ ನೇಮಕಾತಿ ಪ್ರಕ್ರಿಯೆ ಮುಗಿದೋಗಿಬಿಡುತ್ತಿತ್ತು.ಆದರೆ ಸುಪ್ರಿಂ ಕೋರ್ಟ್ ನಲ್ಲಿ ಹಾಕಿರುವ ಮೇಲ್ಮನವಿಯನ್ನೇ ನಂಬಿಕೊಂಡು ಸರ್ಕಾರ ಕೂತಂತಿದೆ

ಕುಲಪತಿಗಳಿಲ್ಲದೆ ಯಾವುದಾದರು ವಿವಿ ಇಷ್ಟೊಂದು ದಿನ ಮುಂದುವರೆದುಕೊಂಡು ಬಂದಿದೆ ಎಂದರೆ ಅದು ಬೆಂಗಳೂರು ವಿವಿ ಮಾತ್ರ ಇರಬಹುದೇನೋ..? ಕುಲಪತಿಗಳ ಹುದ್ದೆಗೆ ಅರ್ಹರೆನಿಸಿಕೊಂಡವರು ವಿವಿಯಲ್ಲಿ ಇದ್ದರೂ ಭರ್ತಿ ಮಾಡುವ ಇರಾದೆ ಸರ್ಕಾರಕ್ಕೆ ಇದ್ದಂತಿಲ್ಲ.ಇದು ನ್ಯಾಯಾಂಗ ನಿಂದನೆ ಅಷ್ಟೇ ಅಲ್ಲ,ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿ ಎಂಬುದು ಕುಲಪತಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ಆಪಾದನೆ.

ಕುಲಪತಿಗಳಿಲ್ಲದೆ ಆಡಳಿತಾತ್ಮಕವಾಗಿ ಎಷ್ಟೋ ನಿರ್ದಾರಗಳು ಹಾಗೆಯೇ ಉಳಿದಿವೆ.ಸಾಕಷ್ಟು ಕೆಲಸಗಳು ಪೆಂಡಿಂಗ್ ಇವೆ. ಮುಂದಿನ ತಿಂಗಳು ಘಟಿಕೋತ್ಸವ ಇದೆ.ರಾಷ್ಟ್ರೀಯ ಅಂತರಾಷ್ಟ್ರೀಯ ಸೆಮಿನಾರ್ಸ್ ಗಳು ನಡೆಯುವುದಿದೆ.ಆದರೆ ಇದೆಲ್ಲದರ ಉಸ್ತುವಾರಿ ಮಾಡಲು ಕುಲಪತಿಗಳೇ ಇಲ್ಲವಾಗಿದೆ.ಯಾವ ವಿವಿಗೂ ಇಂಥ ದುರವಸ್ಥೆ ಬರಬಾರದು ಎಂದು ಪ್ರತಿಭಟನಾ ನಿರತರು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಕೂಡ ಉಪನ್ಯಾಸಕರಿಗೆ ಬೆಂಬಲವಾಗಿ ನಿಂತಿದ್ದಾರೆ.ಪ್ರೊ.ವೇಣುಗೋಪಾಲ್ ಅವರ ಹುದ್ದೆ ಅನೂರ್ಜಿತಗೊಂಡ ಮೇಲೆ ತತ್ ಕ್ಷಣಕ್ಕೆ ಮತ್ತೋರ್ವರನ್ನು ನೇಮಕಾತಿ ಮಾಡುವುದು ಸರ್ಕಾರದ ಹೊಣೆ.ಆ ಹುದ್ದೆ ವಾರಗಳ ಕಾಲವಲ್ಲ, ಒಂದ್ ನಿಮಿಷನೂ ಖಾಲಿ ಉಳಿಯೊಕ್ಕೆ ಬಿಡಬಾರದು,

ಆದರೆ ಹೇಳೋರ್ ಕೇಳೋರ್ ಇಲ್ಲದಂತೆ ಅಂದಾ ದರ್ಬಾರ್ ನಡೆಸುತ್ತಿರುವ ಸರ್ಕಾರ ಸುಪ್ರಿಂ ಕೋರ್ಟ್ ನಲ್ಲಿ ತೀರ್ಪು ವೇಣು ಗೋಪಾಲ್ ಅವರ ಪರವಾಗಿಯೇ ಬರಬಹದು..ಕಾದು ನೋಡೋಣ..ಅಲ್ಲಿವರೆಗೆ ವ್ಯವಸ್ಥೆಯನ್ನು ಹೇಗೋ ಸಂಭಾಳಿಸಿಕೊಂಡು ಹೋದ್ರಾಯ್ತು ಎನ್ನುವ ಮನಸ್ತಿತಿಯಲ್ಲಿದ್ದಂತೆ ಕಾಣುತ್ತಿದೆ.

ಆದರೆ ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ.ಇನ್ನೆರಡು ದಿನಗಳೊಳಗೆ ಖಾಲಿ ಇರುವ ಹುದ್ದೆ ತುಂಬಬೇಕು.ಇಲ್ಲವಾದಲ್ಲಿ ಸೋಮವಾರದಿಂದ ಯೂನಿವರ್ಸಿಟಿ ಬಂದ್ ಮಾಡುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು. ಪ್ರೊ.ವೇಣುಗೋಪಾಲ್ ಅವರ ನೇಮಕಾತಿಯನ್ನೇ ಹೈ  ಕೋರ್ಟ್ ಅಸಿಂಧು ಮಾಡಿ ಅನೂರ್ಜಿತಗೊಳಿಸಿದ ಮೇಲೂ ಸರ್ಕಾರ ಸುಮ್ಮನಿರುವುದು ನಿರ್ಲಕ್ಷ್ಯ ಅಷ್ಟೇ ಅಲ್ಲ ನ್ಯಾಯಾಂಗ ನಿಂದನೆಯೂ ಹೌದು.

Spread the love

Related Articles

Leave a Reply

Your email address will not be published.

Back to top button
Flash News