ಉಕ್ರೇನ್ ಮೇಲಿನ ದಾಳಿಯಲ್ಲಿ ಇದುವರೆಗೆ 1351 ಯೋಧರನ್ನು ಕಳೆದುಕೊಂಡಿದ್ದೇವೆ ಎಂದು ರಷ್ಯಾ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಒಂದು ತಿಂಗಳು ಪೂರೈಸಿದೆ. ಇದುವರೆಗೆ 3875 ಯೋಧರು ಗಾಯಗೊಂಡಿದ್ದಾರೆ.
4,19,736 ನಾಗರಿಕರನ್ನು ಉಕ್ರೇನ್ ನಿಂದ ತೆರವುಗೊಳಿಸಲಾಗಿದೆ. ಇದರಲ್ಲಿ 88 ಸಾವಿರ ಮಕ್ಕಳು ಹಾಗೂ 9000 ವಿದೇಶೀಯರು ಎಂದು ರಷ್ಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ 14000 ಉಕ್ರೇನ್ ಸೈನಿಕರನ್ನು ಹತ್ಯೆಗೈಯ್ಯಲಾಗಿದ್ದು, 16000 ಯೋಧರನ್ನು ಗಾಯಗೊಳಿಸಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ.