BreakingMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

STOP NOTICE TO DEVIATED BUILDINGS.. ಅಕ್ರಮ ಕಟ್ಟಡಗಳಿಗೆ ನೊಟೀಸ್ ನೀಡಿ ಬಿಬಿಎಂಪಿ ಅಧಿಕಾರಿಗಳ ಡೀಲ್..?!

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ವಿರುದ್ದ ಹೈ ಕೋರ್ಟ್ ಸಮರ ಸಾರಿದೆ. ನಕ್ಷೆ ಮಂಜೂರಾತಿ ನಿಯಮಾವಳಿ ಉಲ್ಲಂಘಿಸಿ ನಿರ್ಮಾಣಗೊಂಡಿರುವ  ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿ ಅಧಿಕಾರಿಗಳು ಪ್ರತಿ ದಿನವೂ ಸಾವಿರಾರು ಕಟ್ಟಡ ಮಾಲೀಕರಿಗೆ ನೊಟೀಸ್ ಜಾರಿ ಮಾಡುತ್ತಿದ್ದಾರೆ.ಆದರೆ ಇದರ ಬಗ್ಗೆಯೇ ಕೈ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ..ಅರರೆ..ಅದ್ಹೇಕೆ ಕಳವಳ ಎಂದುಕೊಂಡ್ರಾ ಇಲ್ಲಿದೆ ನೋಡಿ ಆ ಡೀಟೈಲ್ ನ್ಯೂಸ್.

ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪ್ರಕರಣ ಸುಪ್ರಿಂಕೋರ್ಟ ನಲ್ಲಿ ವಿಚಾರಣೆ ಹಂತದಲ್ಲಿದೆ.

ಸುಪ್ರಿಂ ಕೋರ್ಟ ನ ಅಂತಿಮ ತೀರ್ಪು ಬರುವವರೆಗೆ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈ ಕೋರ್ಟ್ ಗೆ ಮನವಿ ಸಲ್ಲಿಸುವಂತೆ  ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರಿನ ಮಾಜಿ ಮೇಯರ್ ಗಳು  ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈಗಾಗಲೇ  ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಕಾನೂನು ತಿದ್ದುಪಡಿಯಾಗಿತ್ತು.ಸಕ್ರಮಗೊಳಿಸಬಹುದಾದ ಮಿತಿಯನ್ನೂ ನಿಗದಿ ಪಡಿಸಲಾಗಿತ್ತು.ವಸತಿ ಕಟ್ಟಡಗಳಿಗೆ ಶೇ.25 -50% ರಷ್ಟು ಡಿವಿಯೇಷನ್ ಗೆ ಅವಕಾಶ ನೀಡಲಾಗಿದೆ. ವಸತಿಯೇತರ ಕಟ್ಟಡಗಳಿಗೆ ಶೇ.12.5-25% ಡೀವಿಯೇಷನ್ ಗೆ ಅವಕಾಶ ನೀಡಲಾಗಿದೆ.

ಬೆಂಗಳೂರನಲ್ಲಿ ಶೇ.98ಕ್ಕಿಂತ ಹೆಚ್ಚು ಕಟ್ಟಡಗಳು ನಕ್ಷೆ ಮಂಜೂರಾತಿ ನಿಯಮಾವಳಿಗಳನ್ನು ಉಲ್ಲಂಘಿಸಿಯೇ ನಿರ್ಮಾಣಗೊಂಡಿವೆ.  ಹಾಗಾಗಿ ಅಲ್ಪ ಪ್ರಮಾಣದಲ್ಲಿ ನಕ್ಷೆ ಮಂಜೂರಾತಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕಟ್ಟಡಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸಲು ಸರ್ಕಾರ 2015 ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿತ್ತು.

ವಸತಿ ಕಟ್ಟಡಗಳಿಗೆ ಶೇ.25 -50% ರಷ್ಟು ಡಿವಿಯೇಷನ್ ಗೆ ಅವಕಾಶ ಮತ್ತು ವಸತಿಯೇತರ ಕಟ್ಟಡಗಳಿಗೆ ಶೇ.12.5-25% ಡೀವಿಯೇಷನ್ ಗೆ ಅವಕಾಶ ನೀಡಿ, ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಿಟಿಜನ್ ಆಕ್ಷನ್ ಫೋರಂ ಎಂಬ ಸಂಸ್ಥೆ ಹೈಕೋರ್ಟ ಮೆಟ್ಟಿಲೇರಿತ್ತು.

ಹೈ ಕೋರ್ಟ 2016 ರಲ್ಲಿ ಎಲ್ಲಾ ರಿಟ್ ಅರ್ಜಿಗಳನ್ನು ವಜಾಗೊಳಿಸಿ, ಸಕ್ರಮ ನಿಯಮಗಳನ್ನು ಎತ್ತಿ ಹಿಡಿದಿತ್ತು. ಹೈ ಕೋರ್ಟ ಮಧ್ಯಂತರ ಆದೇಶದ ವಿರುದ್ದ ಸಿಟಿಜನ್ ಆಕ್ಷನ್ ಫೋರಂ ಸುಪ್ರಿಂಕೋರ್ಟ ಗೆ ಮೇಲ್ಮನವಿ ಸಲ್ಲಿಸಿದೆ. ಸುಪ್ರಿಂಕೋರ್ಟ ಸಕ್ರಮ ಯೋಜನೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣದ ವಿಚಾರಣೆ ಬಾಕಿ ಇದೆ.

ಹಾಗಾಗಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈ ಕೋರ್ಟ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಿದೆ. ಕೋರ್ಟ ಸೂಚನೆಯನ್ನು ಯಥಾವತ್ ಪಾಲಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಪ್ರತಿ ದಿನವೂ ಸಾವಿರಾರು ಕಟ್ಟಡ ಮಾಲೀಕರಿಗೆ ನೊಟೀಸ್ ನೀಡುತ್ತಿದ್ದಾರೆ.

ಕೆಲವೆಡೆಗಳಲ್ಲಿ ಮನೆಗಳನ್ನು ತೆರವುಗೊಳಿಸುವುದಾಗಿ ಬೆದರಿಸಿ ಕಟ್ಟಡ ಮಾಲೀಕರಿಂದ ಹಣವಸೂಲಿ ಮಾಡುವ ದಂಧೆಯೂ  ನಡೆಯುತ್ತಿದೆ ಎನ್ನಲಾಗಿದೆ. ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದು ಕಾಂಗ್ರೆಸ್ ಪ್ರಮುಖರ ಕಳಕಳಿಯಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News