ದೇಶದಲ್ಲಿ ಮೊದಲ ಬಾರಿಗೆ ಸ್ಟೀಲ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ! Gujarat Gets India’s First “Steel Road”, Could Be A Gamechanger

ದೇಶದಲ್ಲಿ ಮೊದಲ ಬಾರಿಗೆ ಸ್ಟೀಲ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ!

0

ಬಳಸಿ ಬಿಸಾಡಿದ ಸ್ಟೀಲ್ ಗಳನ್ನೇ ಬಳಸಿ ಗುಜರಾತ್ ನಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈ ರೀತಿಯ ಪ್ರಯತ್ನ ದೇಶದ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ.

ಸೂರತ್ ನ ಹಜಾರಿಯಾ ಕೈಗಾರಿಕಾ ಪ್ರದೇಶದ ರಸ್ತೆಯನ್ನು ಸ್ಟೀಲ್ ನಿಂದ ನಿರ್ಮಿಸಲಾಗುತ್ತಿದ್ದು, ಇದು ರಸ್ತೆ ನಿರ್ಮಾಣದಲ್ಲಿ ಹೊಸ ಭವಿಷ್ಯ ಬರೆಯಲಿದೆ ಎಂದು ಹೇಳಲಾಗಿದೆ.

19 ದಶಲಕ್ಷ ಟನ್ ತ್ಯಾಜ್ಯ ಸ್ಟೀಲ್ ನಿಂದ ರಸ್ತೆ ನಿರ್ಮಿಸಲಾಗುತ್ತಿದ್ದು, ಇದು ಉತ್ತಮ ಗುಣಮಟ್ಟದ್ದು ಮಾತ್ರವಲ್ಲ, ಇತರೆ ಮಾದರಿಯ ರಸ್ತೆಗಳಿಗಿಂತ ದೀರ್ಘಕಾಲ ಬಾಳಿಕೆ ಬರಲಿದೆ ಎಂದು ವರದಿಗಳು ಹೇಳಿವೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ ಐಆರ್) ಮತ್ತು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸಿಟಿಟ್ಯೂಟ್ ಜಂಟಿಯಾಗಿ ಸ್ಟೀಲ್ ಮತ್ತು ಪಾಲಿಸಿ ಕಮಿಷನ್ ಸಚಿವಾಲಯದ ನೀತಿ ಆಯೋಗದ ಸಹಕಾರದೊಂದಿಗೆ ಈ ಯೋಜನೆ ಕೈಗೆತ್ತಿಕೊಂಡಿದೆ.

1 ಕಿ.ಮೀ. ಉದ್ದದ ಈ 6 ಲೈನ್ ನ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಇದು ಪ್ರಾಯೋಗಿಕ ಯೋಜನೆ ಆಗಿದ್ದು, ಖರ್ಚು ಕೂಡ ಶೇ.30ರಷ್ಟು ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.

Spread the love
Leave A Reply

Your email address will not be published.

Flash News