BreakingTop Newsದೇಶ-ವಿದೇಶ

ಪ್ಯಾರಸಿಟಮೊಲ್ ಸೇರಿ 800 ಔಷಧಗಳ ಬೆಲೆ ಏರಿಕೆ: ಏಪ್ರಿಲ್ 1ರಿಂದ ಜಾರಿ! medcini rate hike

ಪೆಟ್ರೋಲ್ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಒಂದೊಂದಾಗಿ ಎಲ್ಲಾ ಬೆಲೆಗಳು ಗಗನಕ್ಕೇರುತ್ತಿದ್ದು, ಇದೀಗ ಔಷಧಗಳ ಬೆಲೆಯೂ ದುಬಾರಿಯಾಗಿದೆ.

ಏಪ್ರಿಲ್ನಿಂದ ಜ್ವರ, ಹೃದ್ರೋಗ, ಅಧಿಕ ರಕ್ತದೊತ್ತಡ, ಚರ್ಮ ರೋಗ ಮತ್ತು ರಕ್ತಹೀನತೆ ಸೇರಿದಂತೆ ವಿವಿಧ ಚಿಕಿತ್ಸೆಗೆ ಬಳಸುವ 800ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ.

ಏಪ್ರಿಲ್ 1ರಿಂದ ನೋವು ನಿವಾರಕ ಮತ್ತು ರೋಗ ನಿರೋಧಕ ಪ್ಯಾರಸಿಟಮೊಲ್ ಫೆನಿಟೋಯಿನ್ ಸೋಡಿಯಂ, ಮೆಟ್ರೋನಿಡಾಜೋಲ್ ಸೇರಿದಂತೆ ಹಲವು ಔಷಧಗಳ ಬೆಲೆ ದುಬಾರಿ ಆಗಲಿದೆ.

ರಾಷ್ಟ್ರೀಯ ಫಾರ್ಮಾ ಪ್ರೈಸಿಂಗ್ ಅಥಾರಿಟಿ ಪ್ರಕಾರ, ಸಗಟು ಬೆಲೆ ಸೂಚ್ಯಂಕ ಏರಿಕೆಯಿಂದಾಗಿ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಔಷಧಿಗಳ ಬೆಲೆಯನ್ನು ಹೆಚ್ಚಿಸುವಂತೆ ಫಾರ್ಮಾ ಉದ್ಯಮವು ನಿರಂತರವಾಗಿ ಒತ್ತಾಯಿಸುತ್ತಿದ್ದು, ಇದೀಗ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

ನಿಗದಿತ ಔಷಧಗಳ ಬೆಲೆಯಲ್ಲಿ ಶೇ.10.7ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಶೆಡ್ಯೂಲ್ ಔಷಧಗಳು ಅಗತ್ಯ ಔಷಧಿಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳ ಬೆಲೆಗಳನ್ನು ನಿಯಂತ್ರಿಸಲಾಗುತ್ತದೆ. ಅನುಮತಿಯಿಲ್ಲದೆ ಅವುಗಳ ಬೆಲೆಯನ್ನು ಹೆಚ್ಚಿಸುವಂತಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News