ಕೆಲವು ದಿನಗಳ ಹಿಂದೆಯಷ್ಟೇ ಖರೀದಿಸಿದ್ದ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ತಂದೆ ಮತ್ತು ಮಗಳು ಮೃತಪಟ್ಟ ಘಟನೆ ತಮಿಳುನಾಡಿನ ವೆಲ್ಲೂರು ಬಳಿ ಸಂಭವಿಸಿದೆ.
ಎಲೆಕ್ಟ್ರಿಕ್ ಬೈಕ್ ನಲ್ಲಿ ಕಾಣಿಸಿಕೊಂಡ ಬೆಂಕಿ ಹೊತ್ತಿಕೊಂಡ ಪರಿಣಾಮ ಶೀಟ್ ಲ್ಯಾಡನ್ ಬಳಿ ಶೀಟ್ ಮನೆಯಲ್ಲಿ ಮಲಗಿದ್ದ ತಂದೆ- ಮಗಳು ಮೃತಪಟ್ಟಿದ್ದಾರೆ.
ಟೋಲ್ ಗೇಟ್ ಬಳಿ ಫೋಟೊ ಸ್ಟುಡಿಯೋ ನಡೆಸುತ್ತಿದ್ದ ಎಂ ದೊರೈವರ್ಮಾ (49) ಮತ್ತು 13 ವರ್ಷದ ಪುತ್ರಿ ಮೋಹನಾ ಪ್ರೀತಿ ಮೃತಪಟ್ಟಿದ್ದಾರೆ.
ಹೊಸದಾಗಿ ಖರೀದಿಸಿದ್ದ ಇ-ಬೈಕ್ ಚಾರ್ಜರ್ ಬದಲಿಸಿ ದೊರೆವರ್ಮಾ ರಾತ್ರಿ ಮಲಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಕಾಣಿಸಿಕೊಂಡ ಬೆಂಕಿ ಮನೆಗೆ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಕೂಡ ಕಾಣಿಸಿಕೊಂಡಿತು. ಇದರಿಂದ ಮಲಗಿದ್ದ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.