Breakingಸಿನೆಮಾ ಹಂಗಾಮ

ವೇದಿಕೆ ಮೇಲೆ ನಿರೂಪಕನಿಗೆ ಹೊಡೆದ ನಟ ವಿಲ್ ಸ್ಮಿತ್: ಆಸ್ಕರ್ ಪ್ರಶಸ್ತಿ ವಾಪಸ್? will smith hit chris rock in oscar stage

ವೇದಿಕೆ ಮೇಲೆ ನಿರೂಪಕನಿಗೆ ಹಾಲಿವುಡ್ ನಟ ವಿಲ್ ಸ್ಮಿತ್ ಕಪಾಳಮೋಕ್ಷ ಮಾಡಿದ ಘಟನೆಗೆ ಇಡೀ ಚಿತ್ರರಂಗ ಬೆಚ್ಚಿಬಿದ್ದಿದೆ. ಅಲ್ಲದೇ ಇಂತಹ ನಡವಳಿಕೆಯಿಂದ ನಟ ಆಸ್ಕರ್ ಪ್ರಶಸ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ನಿರೂಪಕ ಕ್ರಿಸ್ ರಾಕ್ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ತಮಾಷೆ ಮಾಡುತ್ತಾ ವಿಲ್ ಸ್ಮಿತ್ ಪತ್ನಿ ಜಾಡಾ ಪಿಂಕೆಟ್ ಸ್ಮಿತ್ ಹೆಸರು ಪ್ರಸ್ತಾಪಿಸಿದರು. ಇದರಿಂದ ಅಸಮಾಧಾನಗೊಂಡ ಸ್ಮಿತ್ ವೇದಿಕೆ ಮೇಲೆ ಹೋಗಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದರು.

ವೇದಿಕೆಯ ಮೇಲೆ ಹಲ್ಲೆ ನಡೆಸಿ ಮರಳಿದ ವಿಲ್ ಸ್ಮಿತ್, ನಿನ್ನ ಹೊಲಸು ಬಾಯಲ್ಲಿ ನನ್ನ ಪತ್ನಿ ಹೆಸರು ಪ್ರಸ್ತಾಪಿಸಬೇಡ ಎಂದು ಗುಡುಗಿದರು. ಇದರಿಂದ ತೀವ್ರ ನಿರೂಪಕ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು.
ಕಿಂಗ್ ರಿಚರ್ಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಲ್ ಸ್ಮಿತ್ ಶ್ರೇಷ್ಠ ನಟರಾಗಿ ಆಸ್ಕರ್ ಪ್ರಶಸ್ತಿ ಪಡೆದರು.

ಆಸ್ಕರ್ ಪ್ರಶಸ್ತಿ ಸ್ವೀಕರಿಸುವ ವೇಳೆ ಗದ್ಗತಿರಾದ ಸ್ಮಿತ್, ಘಟನೆ ಬಗ್ಗೆ ಕ್ಷಮೆ ಕೇಳಿದರು. ಆದರೆ ಸಮಾರಂಭದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News