ಅಂಗಡಿಯಲ್ಲಿ ಮನುಷ್ಯರ ಕಣ್ಣು, ಕಿವಿ, ಮೆದುಳು ಪತ್ತೆ! human brain, eye found in shop

ಅಂಗಡಿಯಲ್ಲಿ ಮನುಷ್ಯರ ಕಣ್ಣು, ಕಿವಿ, ಮೆದುಳು ಪತ್ತೆ!

0

ನೆರೆಹೊರೆಯವರು ಗಬ್ಬುವಾಸನೆ ಬರುತ್ತಿದೆ ಎಂದು ಅಂಗಡಿಯನ್ನು ಪರಿಶೀಲಿಸಿದ ಪೊಲೀಸರಿಗೆ ಮನುಷ್ಯ ದೇಹದ ಮೆದುಳು, ಕಿವಿ. ಕಣ್ಣು ಮುಂತಾದ ಅಂಗಾಂಗಗಳು ಸಿಕ್ಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಮುಂಬೈನ ನಾಕಾ ಪ್ರದೇಶದ ಗುಜರಿ ಅಂಗಡಿಯಲ್ಲಿ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟಿದ್ದ ಮೆದುಳು, ಕಣ್ಣು, ಕಿವಿ ಮುಂತಾದ ಅಂಗಾಂಗಳು ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅಂಗಡಿಯ ಅಕ್ಕಪಕ್ಕದವರು ಕೆಲವು ದಿನಗಳಿಂದ ಗಬ್ಬುವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗುಜರಿ ಅಂಗಡಿಯ ಮಾಲೀಕರಾಗಿ ಅಣ್ಣ-ತಮ್ಮಂದಿರು ವೈದ್ಯರಾಗಿದ್ದು, ಇದು ಯಾವುದೊ ಮೆಡಿಕಲ್ ಉದ್ದೇಶಗಳಿಗೆ ತಂದಿರಬಹುದು ಎಂದು ಶಂಕಿಸಲಾಗಿದೆ.

ಮುಂಬೈನ ನಾಕಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

Spread the love
Leave A Reply

Your email address will not be published.

Flash News