ಪತ್ನಿಯ ಜಾಲಿ ಟ್ರಿಪ್ ಹುಚ್ಚಿಗೆ ಗಂಡ ಮಾಡಿದ್ದೇನು ಗೊತ್ತಾ? husband became thief for wifes royal life
ಪತ್ನಿಯ ಜಾಲಿ ಟ್ರಿಪ್ ಹುಚ್ಚಿಗೆ ಗಂಡ ಮಾಡಿದ್ದೇನು ಗೊತ್ತಾ?
ಪತ್ನಿಯ ಜಾಲಿ ಟ್ರಿಪ್ ಮತ್ತು ಮೋಜು ಮಸ್ತಿ ಹುಚ್ಚಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಗಂಡ ಈಗ ಪೊಲೀಸರ ಬೆಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆ.ಆರ್.ಪುರಂ ನಿವಾಸಿ ಇಮ್ರಾನ್ ಖಾನ್ ನನ್ನು ಬಂಧಿಸಿದ್ದ ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು 147 ಗ್ರಾಂ ಚಿನ್ನಾಭರಣ, 1.517 ಕೆಜಿ ಬೆಳ್ಳಿ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಹೆಂಡತಿಯ ಜಾಲೀ ಟ್ರಿಪ್, ಮೋಜು ಮಸ್ತಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಮ್ರಾನ್ ಖಾನ್ 6 ಮನೆಗಳಿಗೆ ಕನ್ನ ಹಾಕಿದ್ದ.
ಬೆಳ್ಳಂಬೆಳಿಗ್ಗೆಯೇ ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಇಮ್ರಾನ್ ಖಾನ್, ಖಚಿತ ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಆಸಾಮಿ ತಗಲಾಕಿ ಕೊಂಡಿದ್ದಾನೆ.
ಮೋಜು ಮಸ್ತಿಯ ಜೀವನಕ್ಕೆ ಕದಿಯುತಿದ್ದ ಆರೋಪಿ, ಬಂದ ಹಣದಲ್ಲಿ ಪತ್ನಿ ಜೊತೆ ದೇಶ ಸುತ್ತುತಿದ್ದ. ಗೋವಿಂದರಾಜನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.