ರಷ್ಯಾದ ಶತಕೋಟ್ಯಾಧಿಪತಿ ಹಾಗೂ ಉಕ್ರೇನ್ ಜೊತೆಗಿನ ಸಂಧಾನಕಾರನನ್ನು ವಿಷ ಹಾಕಿ ಹತ್ಯೆಗೆ ಸಂಚು ರೂಪಿಸಲಾಗಿದೆ.
ರಷ್ಯಾದ ಓಲಿಗ್ರಾಚ್ ರೊಮನ್ ಅಬ್ರಾಮೋವಿಚ್ ಮತ್ತು ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಿಲ್ಲಿಸಲು ಪ್ರಯತ್ನಿಸುತ್ತಿರುವ ರಾಜೀ ಸಂಧಾನಕಾರರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸಂಧಾನಕ್ಕೆ ತೆರಳಿದ್ದ ರಷ್ಯಾದ ಓಲಿಗ್ರಾಚ್ ರೊಮನ್ ಅಬ್ರಾಮೋವಿಚ್ ಮತ್ತು ಉಕ್ರೇನ್ ನ ಇಬ್ಬರು ಹಿರಿಯ ಸಂಧಾನಕಾರರು ಸಂಧಾನ ಸಭೆಯ ನಂತರ ಮರಳಿದಾಗ ಅವರ ಕಣ್ಣುಗಳು ಕೆಂಪಾಗಿದ್ದವು. ಅತ್ಯಂತ ನೋವಿನ ನಡುವೆ ಕಣ್ಣಲ್ಲಿ ನೀರು ಬರುತ್ತಿದ್ದವು. ಚರ್ಮ, ಮುಖ ಮತ್ತು ಕೈಗಳ ಮೇಲೆ ಅಲರ್ಜಿ ಕಾಣಿಸಿಕೊಂಡಿತ್ತು.
ರಾಜೀ ಸಂಧಾನಕಾರರು ತಮ್ಮ ಹತ್ಯೆಗೆ ಕಾಣದ ಕೈಗಳು ಯತ್ನಿಸುತ್ತಿವೆ. ಈ ಮೂಲಕ ಯುದ್ಧ ಅಂತ್ಯ ಕಾಣದಂತೆ ಪ್ರಯತ್ನಗಳು ಸಾಗಿವೆ ಎಂದು ಆರೋಪಿಸಿದ್ದು, ಅಮೆರಿಕದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ.