ಉಕ್ರೇನ್ ನೆರವಿಗೆ ಭಾರತದ ಗಾಯಕಿ ಕಾರ್ಯಕ್ರಮದಲ್ಲಿ ಹಣದ ಸುರಿಮಳೆ! Viral Pics: Dollars “Rain” At US Concert As Gujarati Singer Raises $300,000 For Ukraine

ಉಕ್ರೇನ್ ನೆರವಿಗೆ ಭಾರತದ ಗಾಯಕಿ ಕಾರ್ಯಕ್ರಮದಲ್ಲಿ ಹಣದ ಸುರಿಮಳೆ!

0

ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನೆರವಿಗಾಗಿ ಭಾರತೀಯ ಮೂಲದ ಗಾಯಕಿ ಕಾರ್ಯಕ್ರಮದಲ್ಲಿ ನೋಟುಗಳ ಸುರಿಮಳೆ ಆಗಿದ್ದು, 2.25 ಕೋಟಿ ರೂ. ಸಂಗ್ರಹವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕದ ಅಟ್ಲಾಂಟಾ ಮತ್ತು ಜಾರ್ಜಿಯಾದಲ್ಲಿ ಗುಜರಾತ್ ಮೂಲದ ಗಾಯಕಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಣದ ಹರಿವು ಹರಿಸಿದ್ದಾರೆ. ಈ ಮೂಲಕ ಉಕ್ರೇನಿಯರ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ.

ಗೀತಾ ಬೆನ್ ರಾಬರಿ ಲೋಕ್ ದರಿಯೊ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅನಿವಾಸಿ ಭಾರತೀಯರು ನೋಟು ಚೆಲ್ಲಿದ್ದಾರೆ. ವೇದಿಕೆ ಮೇಲೆ ಬಿದ್ದ ನೋಟುಗಳ ಫೋಟೊ ಇದೀಗ ವೈರಲ್ ಆಗಿದೆ.

Spread the love
Leave A Reply

Your email address will not be published.

Flash News