ಒಡವೆ, ದುಡ್ಡು ಸಮೇತ 5ನೇ ಪತ್ನಿ ಪರಾರಿ: ನೊಂದ ಪತಿ ಆತ್ಮಹತ್ಯೆ 4 failed marriages, man kills self after fifth wife runs away with jewellery, cash

ಒಡವೆ, ದುಡ್ಡು ಸಮೇತ 5ನೇ ಪತ್ನಿ ಪರಾರಿ: ನೊಂದ ಪತಿ ಆತ್ಮಹತ್ಯೆ

0

ನಾಲ್ಕು ಮದುವೆ ವೈಫಲ್ಯ ಆಗಿದ್ದು ಅಲ್ಲದೇ 5ನೇಯವಳು ಕೂಡ 1.5 ಲಕ್ಷ ರೂ. ನಗದು ಹಾಗೂ ಒಡವೆ ಸಮೇತ ಪರಾರಿಯಾಗಿದ್ದರಿಂದ ನೊಂದ ಪತಿರಾಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ವಿವಿಧ ಕಾರಣಗಳಿಗೆ ನಾಲ್ಕು ಮದುವೆಗಳು ಮುರಿದುಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮುಂಬೈನ ನಾಲಾ ಸೋಪಾರ ಮೂಲದ ಮಹಿಳೆಯನ್ನು 5ನೇ ಮದುವೆ ಆಗಿದ್ದ.

ಮದುವೆ ಆದ ಕೆಲವೇ ದಿನಗಳಲ್ಲಿ 5ನೇ ಪತ್ನಿ ಮನೆಯಲ್ಲಿದ್ದ 1.5 ಲಕ್ಷ ರೂ. ಮೌಲ್ಯದ ನಗದು ಹಾಗೂ ಒಡವೆ ಸಮೇತ ಪರಾರಿಯಾಗಿದ್ದಾಳೆ. ಇದರಿಂದ ನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ತನ್ನ ಸಾವಿಗೆ 7 ಮಂದಿ ಕಾರಣ ಎಂದು ಆರೋಪಿಸಿದ್ದಾನೆ.

ಮನೆಯಲ್ಲಿ ದಿಂಬಿನ ಕೆಳಗೆ ಇದ್ದ ಡೆತ್ ನೋಟ್ ತಾಯಿ ಕೈಗೆ ಸಿಕ್ಕಿದೆ. ಇದರಿಂದ ಮಗನ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ತಾಯಿ ಗುಜರಾತ್ ನ ಅಹಮದಾಬಾದ್ ನಗರದ ಅಸ್ಲಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love
Leave A Reply

Your email address will not be published.

Flash News