BreakingTop Newsದೇಶ-ವಿದೇಶ

100ಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷ ಇಂಜೆಕ್ಷನ್ ಹತ್ಯೆ 100 street dogs killed in telangana

ನೂರಕ್ಕೂ ಹೆಚ್ಚು ಬೀದಿ ನಾಯಿಗಳನ್ನು ವಿಷ ಹಾಕಿ ಕೊಂದ ಆಘಾತಕಾರಿ ಘಟನೆ ತೆಲಂಗಾಣದ ಸಿದ್ದಿಪೇಟ್ ನಲ್ಲಿ ನಡೆದಿದೆ.

ಪ್ರಾಣಿದಯ ಸಂಘಟನೆ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದೆ.

ಜಗದೇವ್ ಮಂಡಲದ ಥಿಗುಲ್ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮುಖ್ಯಸ್ಥ ಹಾಗೂ ಕಾರ್ಯದರ್ಶಿ ವೃತ್ತಿಪರ ನಾಯಿ ಹಿಡಿಯುವವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ವಿಷದ ಇಂಜೆಕ್ಷನ್ ನೀಡಿ ಬೀದಿ ನಾಯಿಗಳು ಕೊಲ್ಲಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News