ನಾಳೆ ಸಂಚಾರಿ ವಿಜಯ್ ಅಭಿನಯದ ತಲೆದಂಡ ರಿಲೀಸ್! sanchari vijay’s taledanda relese tommrow

ನಾಳೆ ಸಂಚಾರಿ ವಿಜಯ್ ಅಭಿನಯದ ತಲೆದಂಡ ರಿಲೀಸ್!

0

ಸಂಚಾರಿ ವಿಜಯ್ ಕೊನೆಯ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ, ಹೋರಾಟದ ಕಥೆ ಹೊಂದಿರುವ ತಲೆದಂಡ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ. ಸಿನಿಮಾ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೆ ತಲೆದಂಡ ಸಿನಿಮಾ ಮತ್ತು ತಾನು ಸಂಗೀತ ನಿರ್ದೇಶಕನಾಗಿ ಸಾಗಿ ಬಂದ ಹಾದಿಯನ್ನು ಹರಿಕಾವ್ಯ ಹೇಳುವುದು ಹೀಗೆ.

ತಲೆ ದಂಡ ಸಿನಿಮಾದ ಸಂಗೀತ ನಿದೇರ್ಶಕ ಹರಿ ಕಾವ್ಯ..!

ತಲೆದಂಡ ಚಿತ್ರಕಥೆ ಕೇಳ್ತಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲೀಟ್ ಚಿತ್ರಣ ಬರುತ್ತದೆ. ಆ ಚಿತ್ರಕ್ಕೆ  ಸಂಗೀತ ಏನು ಮಾಡಬೇಕೆಂಬ ಯೋಚನೆ ಮಾಡಿದಾಗ  ಆ ಪ್ರಕೃತಿಯ ಕಲರವವೇ ಮೊದಲು ತಲೆಗೆ ಬರುತ್ತೆ. ಹಾಗಾಗಿ ಈ ಚಿತ್ರಕ್ಕೆ ಪ್ರಕೃತಿಯೇ ಸಂಗೀತದ ಜೀವಾಳವಾಗಿದೆ ಅಂತಾರೆ ಹರಿಕಾವ್ಯ.

ಒಂದು ಹಳ್ಳಿ, ಮುಗ್ಧ ನಾಯಕ , ನಾಯಕಿ , ಎಲ್ಲಾ ಮುಗ್ಧರ ಪಾತ್ರಗಳೇ ಚಿತ್ರದಲ್ಲಿವೆ. ಅದ್ರಲ್ಲಿ ನಾಗರೀಕ ಸಮಾಜದ ಒಂದಷ್ಟು ಎಲಿಮೆಂಟ್ಸ್ , ರಾಜಕೀಯದ ಸನ್ನಿವೇಶಗಳು ಒಳಗೊಂಡಿವೆ. ಪ್ರಕೃತಿಯನ್ನು ಉಳಿಸಲು ಮುಗ್ಧ ನಾಯಕನ ಹೋರಾಟವೇ ಚಿತ್ರದ ಹೈಲೈಟ್ಸ್ ಆಗಿದೆ ಎಂಬುದು ಹರಿಕಾವ್ಯ ಅವರ ಅಭಿಮತವಾಗಿದೆ.

ಪ್ರಕೃತಿ ಪ್ರೇಮ, ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗರ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ಈ ಚಿತ್ರದಲ್ಲಿರುವುದರಿಂದ ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿಕೊಳ್ಳಬೇಕಾಯ್ತು. ಪ್ರತಿ ಸನ್ನಿವೇಶಗಳಿಗೆ ಯಾವ ರೀತಿಯ ಸಂಗೀತ ನೀಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಬೇಕಾಯ್ತು. ಇನ್ನೊಂದೆಡೆ, ಜನಪದ ಗಾಯಕರನ್ನ ಸ್ಟುಡಿಯೋಗೆ ಕರೆಸಿಕೊಂಡು ಅವರಿಂದ ಹಾಡಿಸುವುದು ತುಂಬಾ ಕಾಂಪ್ಲಿಕೇಟೆಡ್ ಆಗಿತ್ತು. ರೆಕಾರ್ಡಿಂಗ್ ವೇಳೆ ಸಾಕಷ್ಟು ಶ್ರಮಪಟ್ಟಿದ್ದೇವೆ. ಪ್ರತಿ ಫ್ರೇಮ್, ಪ್ರತಿ ಬಿಟ್ ಹಾಡುಗಳಿಗೂ ತುಂಬಾನೇ ಎಫರ್ಟ್ ಹಾಕಿದ್ದೇವೆ ಎಂದು ಹೇಳ್ತಾರೆ ಹರಿಕಾವ್ಯ.

ತಲೆದಂಡ ಸಿನಿಮಾಗೆ ಶೂಟಿಂಗ್ ಗಿಂತಲೂ ಮುಂಚೆಯೇ ಬಿಟ್ ಗಳನ್ನ ರೆಡಿ ಮಾಡಿಟ್ಟುಕೊಂಡಿದ್ದೆ. ಒಟ್ಟಾರೆ  12 ಹಾಡುಗಳಿವೆ.. ಎಲ್ಲವೂ ಬಿಟ್ ಸಾಂಗ್ ಗಳು. ಕಥೆಯ ಹೊರತಾಗಿ ಯಾವುದೇ ಒಂದು ಸಣ್ಣ ತುಣಕನ್ನೂ ಬಳಸಿಕೊಂಡಿಲ್ಲ.. ಕಥೆಯ ಒಳಗೆ ಸಮ್ಮಿಲಿತವಾಗಿರುವಂತಹ ಸಂಗೀತವನ್ನು ನೀಡಿದ್ದೇನೆ ಎಂಬ ಸಮಾಧಾನ ಹರಿಕಾವ್ಯ ಅವರದ್ದು.

ಓವರ್ ಆಲ್ ಸಿನಿಮಾದ ಸಂಗೀತವನ್ನ ಆದಷ್ಟು ವೈಭವವಿಲ್ಲದೇ, ನ್ಯಾಚುರಲ್ ಆಗಿ ಕಥೆಗೆ ಹೊಂದಿಕೊಳ್ಳುವಂತೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಹೆಚ್ಚಾಗಿ ಭಾರತೀಯ ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಗಳನ್ನ ಬಳಸಿದ್ದೇನೆ. ಹೆಚ್ಚು ಹಿನ್ನೆಲೆಯಲ್ಲಿ ಧ್ವನಿಯನ್ನೇ ಬಳಸಿಕೊಂಡಿದ್ದೇನೆ ಎಂದು ತಲೆ ದಂಡ ಸಿನಿಮಾದ ಸಂಗೀತದ ಬಗ್ಗೆ ಹರಿ ಕಾವ್ಯ ಹೇಳಿಕೊಂಡಿದ್ದಾರೆ.

ಇನ್ನೂ ಸಂಚಾರಿ ವಿಜಯ್ ಅವರು ಕಥೆಗೆ ತಮ್ಮ ನಟನೆ ಮೂಲಕ ಸಂಪೂರ್ಣ ಜೀವ ತುಂಬಿದ್ದಾರೆ. ಈ ತರಹದ ಒಂದು ಅದ್ಭುತವಾದ ನಟನೆಯನ್ನ ನಾನು ನೋಡಿಯೇ ಇಲ್ಲ. ನಮ್ಮ ಕನ್ನಡದಲ್ಲಿ ಇಂತಹ ಒಂದು ಅದ್ಭುತ ಸಿನಿಮಾವಾಗಿದೆ. ನಮ್ಮ ಪ್ರಕೃತಿ ಬಗ್ಗೆ ಮಾಡಿರುವಂತಹುದ್ದು ಇನ್ನೂ ದೊಡ್ಡ ವಿಶೇಷ. ಒಟ್ಟಾರೆ, ಒಂದು ಒಳ್ಳೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಖುಷಿ ಇದೆ. ಇದು ನನ್ನ ಪುಣ್ಯ ಅಂತಾರೆ ಹರಿ ಕಾವ್ಯ.

ತಲೆದಂಡ ಸಿನಿಮಾದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈ ಮೂರು ವರ್ಷಗಳ ಅನುಭವ ನನಗೆ ಸಂಗೀತದ ಮೇಲೆ ಹಿಡಿತ ಜಾಸ್ತಿಯಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳಿಗೆ ಅತ್ಯುತ್ತಮ ಸಂಗೀತ ನೀಡುವ ಹುಮ್ಮಸ್ಸು ಈ ಸಿನಿಮಾದಿಂದ ನನಗೆ ಸಿಕ್ಕಿದೆ ಎಂದು ಹೇಳ್ತಾರೆ  ಹರಿಕಾವ್ಯ.

ಯಾರಿದು ಹರಿಕಾವ್ಯ.. ಸಂಗೀತ ನಿರ್ದೇಶನದಲ್ಲಿ ಸಾಗಿ ಬಂದ ಹಾದಿ ಹೇಗಿದೆ….!

ಅಂದ ಹಾಗೇ, ಹರಿಕಾವ್ಯ ಅವರು,   ದೃಶ್ಯ ಕಲೆಯಲ್ಲಿ ಎಂ ಎಫ್ ಎ ಪದವೀಧರ. ಕರ್ನಾಟಕ ಸಂಗೀತದಲ್ಲಿ ಗುರುಕುಲ ಪರಂಪರೆಯಲ್ಲಿ ಸಂಗೀತವನ್ನು ಕಲಿತಿದ್ದಾರೆ.  ಗಾಯನದಲ್ಲಿ ಬಳ್ಳಾರಿ ರಾಘವೇಂದ್ರ ಮತ್ತು ಡಾ. ಸಿ. ಎ ಶ್ರೀಧರ್ ಅವರ ಬಳಿ ಸುಮಾರು 15 ವರ್ಷಗಳಿಂದ ಅಭ್ಯಾಸ ಮಾಡಿದ್ದಾರೆ.

Spread the love
Leave A Reply

Your email address will not be published.

Flash News