ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಗುರುವಾರವೂ ಏರಿಕೆ ಕಂಡಿದೆ. ಈ ಮೂಲಕ ಕಳೆದ 10 ದಿನಗಳಲ್ಲಿ 9ನೇ ದಿನವೂ ಏರಿಕೆ ಕಂಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 80 ಪೈಸೆ ಏರಿಕೆಯಾಗಿದೆ. ಇದರಿಂದ ಕಳೆದ 9 ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 6.40 ರೂ. ಏರಿಕೆಯಾದಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಇಂಧನ ದರ ಏರಿಕೆಯಾಗುತ್ತಲೇ ಇದೆ. ಕಾಂಗ್ರೆಸ್ ಇಂಧನ ದರ ಏರಿಕೆ ಖಂಡಿಸಿ ಮೂರು ಹಂತಗಳ ಹೋರಾಟಕ್ಕೆ ಇಂದು ಚಾಲನೆ ನೀಡಿದೆ.