ಕೇಜ್ರಿವಾಲ್ ನಿವಾಸ ಹಾನಿ: 8 ಮಂದಿ ಅರೆಸ್ಟ್! 8 arrest for kejriwal house vanisied

ಕೇಜ್ರಿವಾಲ್ ನಿವಾಸ ಹಾನಿ: 8 ಮಂದಿ ಅರೆಸ್ಟ್!

0

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆಗೆ ಹಾನಿ ಮಾಡಿದ 8 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಇನ್ನೂ 6 ಮಂದಿಗಾಗಿ ಹುಡುಕಾಟ ನಡೆಸಿದ್ದಾರೆ.

ಕಾಶ್ಮೀರಿ ಫೈಲ್ಸ್ ಕುರಿತ ಹೇಳಿಕೆಗೆ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿ ಗಾಜು, ಪೀಠೋಪಕರಣಗಳನ್ನು ಹಾನಿಗೊಳಿಸಿದ್ದರು.

ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಯತ್ನಿಸಲಾಗಿದೆ ಎಂದು ಆಪ್ ಗಂಭೀರ ಆರೋಪ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ 8 ಮಂದಿಯನ್ನು ಬಂಧಿಸಿದ್ದಾರೆ.

ದಾಂಧಲೆ ಪ್ರಕರಣದ ಕುರಿತು ಸ್ವತಂತ್ರ ಎಸ್ ಐಟಿ ತನಿಖೆಗೆ ಅರವಿಂದ್‍ ಕೇಜ್ರಿವಾಲ್ ಆಗ್ರಹಿಸಿದ್ದು, ನಿಗದಿತ ಗಡುವಿನೊಳಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

Spread the love
Leave A Reply

Your email address will not be published.

Flash News