ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಚಾರಿತ್ರಿಕ ಜಯದ ಪೇಟಿಂಗ್ 6 ಕೋಟಿ ರೂ.ಗೆ ಮಾರಾಟ! painting of Tipu Sultan’s Historic Victory Over British Sold In UK For Rs. 6 Crore

ಬ್ರಿಟಿಷರ ವಿರುದ್ಧ ಟಿಪ್ಪು ಸುಪ್ತಾನ್ ಚಾರಿತ್ರಿಕ ಜಯದ ಪೇಟಿಂಗ್ 6 ಕೋಟಿ ರೂ.ಗೆ ಮಾರಾಟ!

0

ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಚಾರಿತ್ರಿಕ ಜಯ ಸಾಧಿಸಿದ್ದ ಪೇಟಿಂಗ್ ಲಂಡನ್ ನಲ್ಲಿ ದಾಖಲೆಯ 6 ಕೋಟಿ ರೂ.ಗೆ ಮಾರಾಟವಾಗಿದೆ.

ಮೈಸೂರನ್ನು ಆಳಿದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ 1780ರಲ್ಲಿ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ದಾಳಿ ನಡೆಸುತ್ತಿರುವ ಪೇಟಿಂಗ್ ಬುಧವಾರ ಲಂಡನ್ ನಲ್ಲಿ ಹರಾಜಿಗೆ ಇಡಲಾಗಿತ್ತು.

ಹರಾಜಿನಲ್ಲಿ ಟಿಪ್ಪು ಸುಲ್ತಾನ್ ಪೇಟಿಂಗ್ 6,30,000 ಡಾಲರ್ ಗೆ ಅಂದರೆ ಭಾರತೀಯ ರೂಪಾಯಿ ಪ್ರಕಾರ 6.28 ಕೋಟಿ ರೂ.ಗೆ ಮಾರಾಟವಾಯಿತು.

1780, ಸೆಪ್ಟೆಂಬರ್ 10ರಂದು 2ನೇ ಆಂಗ್ಲೋ-ಮೈಸೂರು ಯುದ್ಧ ಎಂದೇ ಖ್ಯಾತಿ ಪಡೆದಿದ್ದ ದಿ ಬ್ಯಾಟಲ್ ಆಫ್ ಪೊಲಿಯುರ್ ಚಿತ್ರ ಇದಾಗಿದೆ. ಈ ಜಯದ ಸಂಕೇತವಾಗಿ ಟಿಪ್ಪು ಸುಲ್ತಾನ್ 1984ರಲ್ಲಿ ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಉದ್ಯಾನವನ ನಿರ್ಮಿಸಿ ಈ ಚಿತ್ರವನ್ನು ಪ್ರದರ್ಶನಕ್ಕಿಟ್ಟಿದ್ದರು.

ಬ್ರಿಟಿಷರನ್ನು ಸೋಲಿಸಬಹುದು ಎಂದು ತೋರಿಸಿಕೊಟ್ಟಿದ್ದು ಟಿಪ್ಪು ಸುಲ್ತಾನ್. ಈಸ್ಟ್ ಇಂಡಿಯಾ ಕಂಪನಿ ಎದುರಿಸಿದ ಅತ್ಯಂತ ಪ್ರಬಲ ಎದುರಾಳಿಯಾಗಿದ್ದ ಟಿಪ್ಪು ಮೊದಲ ಬಾರಿ ಸೋಲಿನ ರುಚಿ ತೋರಿಸಿದ್ದರು. ಭಾರತೀಯರು ತಿರುಗಿಬೀಳಬಹುದು ಎಂದು ಈ ಯುದ್ಧ ತೋರಿಸಿಕೊಟ್ಟಿತು ಎಂದು ಹರಾಜು ವೇಳೆ ಟಿಪ್ಪು ಹಾಡಿ ಹೊಗಳಲಾಯಿತು.

Spread the love
Leave A Reply

Your email address will not be published.

Flash News