BreakingTop News

ಲಕ್ನೊ ಸೂಪರ್ ಗೈಂಟ್ಸ್ ಗೆ ರೋಚಕ ಜಯ, ಚೆನ್ನೈ ಸೂಪರ್ ಕಿಂಗ್ಸ್ ಗೆ 2ನೇ ಆಘಾತ IPL 2022, LSG vs CSK highlights: Lewis, De Kock fifties power LSG to maiden IPL win

ಒತ್ತಡದ ಸಂದರ್ಭದಲ್ಲೂ ಇವಿನ್ ಲೆವಿಸ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ 6 ವಿಕೆಟ್ ಗಳ ಜಯಭೇರಿ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 2ನೇ ಸೋಲುಂಡಿದೆ.

ಬ್ರೆಬೊರ್ನ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 210 ರನ್ ಗಳ ಕಠಿಣ ಗುರಿ ಬೆಂಬತ್ತಿದ ಲಕ್ನೊ ಸೂಪರ್ ಗೈಂಟ್ಸ್ 3 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಲಕ್ನೊ ತಂಡಕ್ಕೆ ಕ್ವಿಂಟನ್ ಡಿಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಮೊದಲ ವಿಕೆಟ್ ಗೆ 99 ರನ್ ಜೊತೆಯಾಟ ನಿಭಾಯಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಕಾಕ್ 45 ಎಸೆತಗಳಲ್ಲಿ 9 ಬೌಂಡರಿ ಸೇರಿದ 61 ರನ್ ಗಳಿಸಿದರೆ, ರಾಹುಲ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 40 ರನ್ ಚಚ್ಚಿದರು.

ಕೊನೆಯ ಹಂತದಲ್ಲಿ ಲೆವಿಸ್ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಅಜೇಯ 55 ರನ್ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

Spread the love

Related Articles

Leave a Reply

Your email address will not be published.

Back to top button
Flash News