ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 80 ಪೈಸೆ ಏರಿಸಲಾಗಿದೆ. ಈ ಮೂಲಕ ಕಳೆದ 13 ದಿನದಲ್ಲಿ ಇಂಧನ ದರ 8 ರೂ. ಏರಿಸಿದಂತಾಗಿದೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಮುಂದುರಿದಿರುವ ಹಿನ್ನೆಲೆಯಲ್ಲಿ 14 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ದೇಶದಲ್ಲಿ ಇಂಧನ ದರ ಸತತವಾಗಿ ಏರಿಸುತ್ತಿವೆ.
ನಾಲ್ಕು ತಿಂಗಳ ಬಿಡುವಿನ ನಂತರ ಮಾರ್ಚ್ 22ರಿಂದ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 103.41 ರೂ. ಹಾಗೂ ಡೀಸೆಲ್ ದರ 94.67ರೂ.ಗೆ ಜಿಗಿತ ಕಂಡಿದೆ.
ಮಾರ್ಚ್ 22ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 11 ಬಾರಿ ಏರಿಕೆ ಕಂಡಿದ್ದು, ನಾಳೆಯಿಂದ ಕರ್ನಾಟಕದಲ್ಲಿ ಹೋಟೆಲ್ ತಿಂಡಿ ಬೆಲೆ 5 ರೂ. ಹೆಚ್ಚಳವಾಗಲಿದೆ.