87 ಬಾರಿ ಕೋವಿಡ್ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಯೊಬ್ಬ ಮತ್ತೊಮ್ಮೆ ಲಸಿಕೆ ಪಡೆಯಲು ಬಂದಾಗ ಸಿಕ್ಕಿಬಿದ್ದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಕೋವಿಡ್ ಲಸಿಕೆ ಪಡೆಯಲು ಇಚ್ಚಿಸದೇ ಇರುವವರು ಹಣ ನೀಡುತ್ತಿದ್ದ ಕಾರಣ ಅವರ ಬದಲಿಗೆ ಆರೋಗ್ಯ ಸಿಬ್ಬಂದಿಯೊಬ್ಬ 87 ಬಾರಿ ಲಸಿಕೆ ಪಡೆದಿದ್ದಾನೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸೆಕ್ಸಾನಿ ಸೇರಿದಂತೆ 3 ರಾಜ್ಯಗಳ ವಿವಿಧೆಡೆ ತೆರಳಿ 61 ವರ್ಷದ ವೃದ್ಧ ಲಸಿಕೆ ಪಡೆಯುತ್ತಿದ್ದ. ವಿವಿಧ ಮಾದರಿಯ ಲಸಿಕೆಯನ್ನು ಪ್ರತಿದಿನ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿದಿನ ಲಸಿಕೆ ಪಡೆಯುತ್ತಿದ್ದ ವೃದ್ಧ ಹೆಸರು, ಜನ್ಮದಿನಾಂಕ, ವಿಳಾಸ ಮಾಹಿತಿ ನೀಡುತ್ತಿದ್ದರೂ ವಿಮಾ ಕಂಪನಿಯ ಮಾಹಿತಿ ನೀಡದೇ ತಪ್ಪಿಸುತ್ತಿದ್ದ.
ಡ್ರೆಸ್ಡೊನ್ ಕೇಂದ್ರದಲ್ಲಿ ಲಸಿಕೆ ಪಡೆಯಲು ಬಂದಾಗ ಈ ವೃದ್ಧನನ್ನು ಗುರುತು ಪತ್ತೆಹಚ್ಚಿದ ಆರೋಗ್ಯ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.