ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಏಪ್ರಿಲ್ ದಲಿತರ ಮಾಸ ಎಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯ ಘೋಷಿಸಿದೆ.
ನ್ಯೂ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ (NDP) ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ, ಏಪ್ರಿಲ್ ತಿಂಗಳನ್ನು ದಲಿತ ಇತಿಹಾಸ ತಿಂಗಳು ಎಂದು ಆಚರಿಸುವುದಾಗಿ ಸರ್ಕಾರ ಹೇಳಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಎಪ್ರಿಲ್ ತಿಂಗಳು ಮಹತ್ವದ ತಿಂಗಳಾಗಿದ್ದು, ದಲಿತ ಇತಿಹಾಸದ ದಿನಗಳನ್ನು ಎಪ್ರಿಲ್ ನಲ್ಲಿ ಆಚರಿಸಲಾಗುತ್ತದೆ. ಇದಲ್ಲದೇ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸೇರಿದಂತೆ ಹಲವು ಮಹತ್ವದ ದಿನಗಳು ಎಪ್ರಿಲ್ ನಲ್ಲೇ ಬರುತ್ತದೆ.
ವರ್ಣ ಭೇಧ, ತಾರತಮ್ಯದ ವಿರುದ್ಧ ಹೋರಾಡಲು ಹಾಗೂ ಎಲ್ಲರಿಗೂ ನ್ಯಾಯ ಮತ್ತು ಸಮಾನತೆ ಕಲ್ಪಿಸಲು ಬ್ರಿಟಿಷ್ ಕೊಲಂಬಿಯಾ ಸರ್ಕಾರವು ಈ ಮಹತ್ವದ ಹೆಜ್ಜೆಯನ್ನಿಟ್ಟಿರುವ ಸರ್ಕಾರ ಈ ನಿರ್ಧಾರ ಘೋಷಿಸಿದೆ.
ದಲಿತರಿಗೆ ಏಪ್ರಿಲ್ ತಿಂಗಳು ಬಹಳ ಪ್ರಮುಖವಾದದ್ದು ಏಕೆಂದರೆ, ಡಾ.ಬಿ.ಆರ್. ಅಂಬೇಡ್ಕರ್, ಜ್ಯೋತಿಬಾಫುಲೆ, ಮಂಗುರಾಮ್ ಮುಗೋವಾಲಿಯ ಮತ್ತು ಸಂತರಾಮ್ ಉದಾಸಿಯಂತಹ ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸಮಾಜ ಸುಧಾರಕರ ಜನ್ಮ ದಿನಚರಣೆ ಹಾಗೂ ಮರಣ ದಿನಗಳು ಏಪ್ರಿಲ್ ತಿಂಗಳಿನಲ್ಲಿಯೇ ಬರುತ್ತದೆ. ಹೀಗಾಗಿ ಈ ತಿಂಗಳಿನಲ್ಲಿ ಅತೀ ಹೆಚ್ಚು ಸ್ಮರಣಾ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತವೆ.