ಐಪಿಎಲ್: ಗಿಲ್ ಅಬ್ಬರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಗಲಿಬಿಲಿ: ಗುಜರಾತ್ ಗೆ ಸುಲಭ ಜಯ IPL: gill fiffty, rajastan beat delhi

ಐಪಿಎಲ್: ಗಿಲ್ ಅಬ್ಬರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಗಲಿಬಿಲಿ: ಗುಜರಾತ್ ಗೆ ಸುಲಭ ಜಯ

0

ಶುಭಮನ್ ಗಿಲ್ ಅರ್ಧಶತಕ ಹಾಗೂ ಮಧ್ಯಮ ವೇಗಿ ಲೂಕಿ ಫರ್ಗ್ಯೂಸನ್ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 20 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದೆ.

ಪೂಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 171 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18 ಓವರ್ ಗಳಲ್ಲಿ 151 ರನ್ ಗೆ ಪತನಗೊಂಡಿತು.

ಡೆಲ್ಲಿ ತಂಡ ಫರ್ಗ್ಯೂಸನ್ ಮಾರಕ ದಾಳಿಗೆ ತತ್ತರಿಸಿ 34 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಯಿತು. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (43), ಲಲಿತ್ ಯಾದವ್ (25) ಮತ್ತು ರೊವ್ ಮನ್ ಪೊವೆಲ್ (20) ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಫರ್ಗ್ಯೂಸನ್ 4 ವಿಕೆಟ್ ಪಡೆದರೆ, ಮೊಹಮದ್ ಶಮಿ 2 ವಿಕೆಟ್ ಗಳಿಸಿದರು.

Spread the love
Leave A Reply

Your email address will not be published.

Flash News