78 ವರ್ಷದ ವೃದ್ಧೆಯೊಬ್ಬರು ತನ್ನೆಲ್ಲಾ ಆಸ್ತಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟಿದ್ದಾರೆ.
ಪುಷ್ಪಾ ಮುಂಜಿಲ್ ಎಂಬ ವೃದ್ಧೆ ಡೆಹ್ರಾಡೂನ್ ನ್ಯಾಯಾಲಯದಲ್ಲಿ ತಮ್ಮ ಹೆಸರಿನಲ್ಲಿದ್ದ 50 ಲಕ್ಷ ರೂ. ಮೌಲ್ಯದ ಆಸ್ತಿ ಹಾಗೂ 10 ತೊಲ ಬಂಗಾರದ ಮೇಲಿನ ಹಕ್ಕನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಅವರಿಂದ ಪ್ರಭಾವಿತರಾಗಿರುವ ಪುಷ್ಪಾ ಮಂಜಿಲ್, ರಾಹುಲ್ ಗಾಂಧಿ ಅವರ ಚಿಂತನೆಗಳು ಪ್ರಸ್ತುತ ದೇಶದ ಪಾಲಿಗೆ ಅತ್ಯಗತ್ಯವಾಗಿದೆ. ಆದ್ದರಿಂದ ಅವರ ಹೆಸರಿಗೆ ತನ್ನ ಆಸ್ತಿ ಬರೆದಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಮೆಟ್ರೊಪಾಲಿಟಿನ್ ಮುಖ್ಯಸ್ಥ ಲಾಲ್ ಚಂದ್ ಶರ್ಮ ಈ ವಿಷಯ ಪ್ರಕಟಿಸಿದ್ದು, ಕಾಂಗ್ರೆಸ್ ಅಧ್ಯಕ್ಷರಿಗೆ ಹಕ್ಕುಪತ್ರವನ್ನು ಪುಷ್ಪಾ ಮಂಜಿಲ್ ಹಸ್ತಾಂತರಿಸಿದ್ದಾರೆ ಎಂದು ತಿಳಿಸಿದ್ದಾರೆ.