ಸ್ಯಾಂಡಲ್ ವುಡ್ ನ ಬಿಗ್ ಬ್ರೇಕಪ್: ಮದುವೆ ಹಂತದಲ್ಲಿ ಮುರಿದುಬಿದ್ದ ಮಾನ್ವಿತಾ- ನಕುಲ್ ಪ್ರೇಮ್ ಕಹಾನಿ! sandalwood actress manvitha marriage broken
ಸ್ಯಾಂಡಲ್ ವುಡ್ ನ ಬಿಗ್ ಬ್ರೇಕಪ್: ಮದುವೆ ಹಂತದಲ್ಲಿ ಮುರಿದುಬಿದ್ದ ಮಾನ್ವಿತಾ- ನಕುಲ್ ಪ್ರೇಮ್ ಕಹಾನಿ!
ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾನ್ವಿತಾ ಮತ್ತು ನಿರೂಪಕ ನಕುಲ್ ಗೌಡ ಪ್ರೇಮ್ ಕಹಾನಿ ಮದುವೆ ಹಂತದಲ್ಲಿ ಮುರಿದುಬಿದ್ದಿದೆ.
ಕೆಂಡ ಸಂಪಿಗೆ, ಟಗರು ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಾನ್ವಿತಾ ಕಾಮತ್ ಮತ್ತು ನಿರೂಪಕ ನಕಲು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಗುಪ್ತ್ ಗುಪ್ತ್ ಪ್ರೇಮ್ ಕಹಾನಿ ಮದುವೆ ಹಂತಕ್ಕೆ ತಲುಪಿತ್ತು.
ಮೇ 10 ಮತ್ತು 11ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ಮಾಡಲು ಎರಡೂ ಕುಟುಂಬಗಳ ಹಿರಿಯರು ಕೂಡ ನಿಶ್ಚಯಿಸಿದ್ದರು. ಆದರೆ ಏನಾಯಿತೋ ದಿಢೀರನೆ ಮದುವೆ ಮಾತುಕತೆ ಮುರಿದುಬಿದ್ದಿದೆ.
ಮದುವೆ ಮುರಿದುಬಿದ್ದಿದ್ದರಿಂದ ಆಘಾತಗೊಂಡಿರುವ ಮಾನ್ವಿತಾ ಹೈದರಾಬಾದ್ ಗೆ ತೆರಳಿದರೆ, ನಕುಲ್ ಗೌಡ ಡಿಪ್ರೆಷನ್ ಗೆ ಹೋಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.