COMMISSION FOR PROMOTION ALLEGATION..!? DEPUTY SECRETARY ELISHA ANDREWS SUSPEND “ಕಮಿಷನ್ ಕಳಂಕ”ಕ್ಕೆ ಎಲಿಷಾ ಆಂಡ್ರ್ಯೂಸ್ ಸಸ್ಪೆಂಡ್.?! ರಾಜಕೀಯದವರ ಚಿತಾವಣೆಗೆ “ಬಲಿ”ಯಾದ್ರಾ..?!

ಭಡ್ತಿಗೆ ಎಲಿಷಾ “ಡಿಮ್ಯಾಂಡ್” ಮಾಡಿದ್ರೋ..?! ರಾಜಕಾರಣಿಗಳೇ ಅವರಿಂದ ಹಾಗೆ ಮಾಡಿಸಿದ್ರೋ..!?

0

ಬೆಂಗಳೂರು:“ಕಮಿಷನ್ ಸರ್ಕಾರ..ಪರ್ಸಂಟೇಜ್  ಮಂತ್ರಿ” ಗಳೆನ್ನುವ ಅಪಖ್ಯಾತಿ ಹಾಗೂ ಕಳಂಕ ರಾಜ್ಯ ಬಿಜೆಪಿ ಸರ್ಕಾರವನ್ನೂ ಬಿಟ್ಟಿಲ್ಲ.ಭ್ರಷ್ಟಚಾರ ಎಲ್ಲೇ ನಡೆದ ರೂ..ಹೇಗೆನೇ ನಡೆದರೂ ಅದಕ್ಕೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕುಮ್ಮಕ್ಕಿಲ್ಲದಿರೊಕ್ಕೆ ಸಾಧ್ಯ ವೇ ಇಲ್ಲ ಎನ್ನೋದು ಎಂಥವರಿಗೂ ಅರ್ಥವಾಗುವ ಕಾಮನ್ ಸೆನ್ಸ್.

ಭ್ರಷ್ಟಾಚಾರದ ಕೂಪದಲ್ಲಿ ಇಬ್ರು ಬಿದ್ದರೂ ತನ್ನನ್ನು ರಕ್ಷಿಸಿಕೊಳ್ಳೊಕ್ಕೆ ಅಧಿಕಾರಿಗಳ ತಲೆಗೆ ಕಳಂಕ ಕಟ್ಟಿ,ಭ್ರಷ್ಟಾಚಾರದ  ಕೆಸರನ್ನು ಅವರ ಮೂತಿಗೆ ಒರೆಸಿ,ಅಮಾನತು ಎನ್ನುವ ನಾಟಕ ಸೃಷ್ಟಿಸಿ,ತಮ್ಮನ್ನು ಸಾಚಾಗಳಂತೆ ಬಿಂಬಿಸಿಕೊಳ್ಳುವ “ಖತರ್ನಾಕ್” ಮಂದಿ ಈ ರಾಜಕಾರಣಿಗಳು ಎನ್ನೋದೂ ಸಮಾಜಕ್ಕೆ ಗೊತ್ತು.. ಅಮಾನತಾಗಿರುವ ಸರ್ಕಾರದ ಉಪಕಾರ್ಯದರ್ಶಿ ಎಲಿಷಾ ಆಂಡ್ರ್ಯೂಸ್ ಕಥೆಯೂ ಇದಕ್ಕೆ ಹೊರತಾಗಿಲ್ಲ ಎನಿಸುತ್ತೆ.

ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಎಲಿಷಾ ಆಂಡ್ರ್ರ್ಯೂಸ್ ಅಮಾನತ್ತಾಗಿದ್ದಾರೆ.ಅವರನ್ನು ಭಡ್ತಿಗೆ ಕಮಿಷನ್ ಪಡೆದರೆನ್ನುವ,ಸಾಕಷ್ಟು ಕಡತಗಳನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟುಕೊಂಡ ಆರೋಪದ ಕಾರಣಕ್ಕೆ ಅಮಾನತು ಮಾಡಲಾಗಿದೆಯಂತೆ.ಸರ್ಕಾರಿ ನೌಕರರೊಂದಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ,ಕಡತಗಳನ್ನು ಕೊಟ್ಟರೆ ಅದನ್ನು ನಿಗಧಿತ ಅವಧಿಯೊಳಗೆ ವಿಲೇ ಮಾಡದೆ ಹಾಗೆಯೇ ಉಳಿಸಿಕೊಂಡಿರುವುದು ಅಮಾನತ್ತಿಗೆ ಕಾರಣವಾಗಿ ನೀಡಲಾಗಿದೆ.ಆದರೆ ಕಡತ ಉಳಿಸಿಕೊಳ್ಳೋ ಸಂಪ್ರದಾಯ ನಗರಾಭಿವೃದ್ದಿ ಇಲಾಖೆಯಲ್ಲಿ ಹೊಸದೇನೂ ಅಲ್ಲ,ಹೀಗಿರುವಾಗ ಅದನ್ನೇ ಮುಖ್ಯ ಕಾರಣವಾಗಿಟ್ಟುಕೊಂಡು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಕೊಡುತ್ತಿರುವ ಕಾರಣ ಅಷ್ಟೇನೂ ಸಮಂಜಸ ಎನಿಸುತ್ತಿಲ್ಲ.

ಕಮಿಷನ್-ಪರ್ಸಂಟೇಜ್ ವ್ಯವಹಾರ ಎನ್ನೋದು ಎಲ್ಲಾ ಸರ್ಕಾರಗಳಲ್ಲಿ ಹಿಂದೆಯೂ ಇತ್ತು.ಈಗಲೂ ಇದೆ..ಮುಂದೆಯೂ ಇರುತ್ತದೆ.ಅದು ಆಡಳಿತದ ಭಾಗವಾಗ್ಹೋಗಿದೆ.ಅದನ್ನು ಮೂಲೋತ್ಪಾಟನೆ ಮಾಡುತ್ತೇನೆನ್ನೋದು ಮೂರ್ಖತನದ ಪರಮಾವಧಿ ಆಗಬಹುದೇನೋ..ಕಾಮಗಾರಿ-ಟ್ರಾನ್ಸ್ ಫರ್ ಎನ್ನುವುದರಲ್ಲಿ ಕಮಿಷನ್ ಎನ್ನೋದು ಕಾಮನ್.ಇದರಲ್ಲಿ ಪರ್ಸಂಟೇಜ್ ನ್ನು ಪ್ರತಿಯೋರ್ವ ರಾಜಕಾರಣಿ ಹಾಗೂ ಅಧಿಕಾರಿ ಅವರವರ ತಾಕತ್ತಿನ ಮೇಲೆ ಪಡೆಯುತ್ತಾರೆನ್ನುವುದು ಎಲ್ಲರಿಗು ಗೊತ್ತಿರೋದೇ.. ಇಲ್ಲ ನಾನು ಸಾಚಾ ಎಂದು ಹೇಳೋವರನ್ನು( ಪ್ರಾಮಾಣಿಕರು ಸಿಕ್ಕರೆ ಅದು ಬೆರೆಳೆಣಿಕೆಯಷ್ಟು ಬಿಡಿ..) ನಂಬೋದು ನಮ್ಮ ಮೂರ್ಖತನವಾದೀತೇನೋ..?

ಎಲಿಷಾ ಆಂಡ್ರ್ಯೂಸ್ ವಿಚಾರವನ್ನು ಇದೇ ಆಂಗಲ್ ನಲ್ಲಿ ನೋಡಬೇಕಾಗ್ತದೆ.ಭಡ್ತಿಗಾಗಿ ಕಮಿಷನ್ ಪಡೆದರೆನ್ನುವುದೋ ಅಥವಾ ಡಿಮ್ಯಾಂಡ್ ಮಾಡಿದರೆನ್ನುವ ಆರೋಪಗಳು ಕೇವಲ ಹೇಳಿಕೆಗೆ ಸೀಮಿತವಾಗಿದ್ವು.ದೂರು ಕೊಟ್ಟವರೂ ಕೂಡ ಎಲಿಷಾ ಹೆಸರನ್ನು ಉಲ್ಲೇಖಿಸಿರಲಿಲ್ಲ.ಒಂದ್ವೇಳೆ ಅವರು ಹಾಗೆ ಮಾಡಿದ್ದರೆನ್ನುವುದೇ ಸತ್ಯ ಎಂದಿಟ್ಟುಕೊಳ್ಳೋಣ,ಅದರ ಹಿಂದೆ ಯಾವುದೇ ರಾಜಕಾ ರಣಿಗಳ ಒತ್ತಡ ಇರಲಿಲ್ಲವೇ..? ಅದನ್ನು ಎಲಿಷಾ ಸಂಬಂಧಪಟ್ಟವರಿಗೆ ಒಪ್ಪಿಸುತ್ತಿರಲಿಲ್ಲವೇ..? ಇದೆಲ್ಲವೂ ರಾಜಕಾರಣಿ ಗಳಿಗೆ ಗೊತ್ತಿ ಲ್ಲದೆ ನಡೆದಿರಲು ಸಾಧ್ಯವೇ ಇಲ್ಲ..  ಎಲಿಷಾಗೆ ಕಮಿಷನ್ ಸಿಕ್ಕಿದ್ರೂ ಅದನ್ನು ಒಬ್ಬರೇ ತಿಂದು ತೇಗುವ ದೈರ್ಯ ಅವರು ಮಾಡುತ್ತಿದ್ದರಾ…ಇದೆಲ್ಲಾ ಕಾಮನ್ ಸೆನ್ಸ್.

ಹೀಗಿರುವಾಗ ಸರ್ಕಾರದ ಮೇಲೆ ಕಮಿಷನ್ ಕಳಂಕ ಬಂದಿದೆ.ಇದಕ್ಕೆಲ್ಲಾ ಎಲಿಷಾನೇ ಕಾರಣ ಎಂದು ಗೂಬೆ ಕೂರಿಸಿದ್ದು ಯಾವ ನ್ಯಾಯ..ಒಂದ್ವೇಳೆ ಎಲಿಷಾ ಇಷ್ಟೆಲ್ಲಾ ಮಾಡಿದ್ದು ನಿಜವೇ ಆಗಿದ್ದರೆ, ಗೆದ್ದಾಗ ಆಡೊಕ್ಕೆ ಬಂದೆ..ಸೋತ್ರೆ ನೋಡೊಕ್ಕೆ ಬಂದೆ ಎನ್ನುವ ಮನಸ್ತಿತಿಯ ರಾಜಕಾರಣಿಗಳ ಬಗ್ಗೆ ಎಚ್ಚರದಿಂದಿರಬೇಕಿತ್ತೆನ್ನೋದು ಅನೇಕ ಕೆಎಎಸ್ ಅಧಿಕಾರಿಗಳ ಅಭಿಪ್ರಾಯ.ಒತ್ತಡಕ್ಕೆ ಮಣಿದೋ, ಆಸೆಗೆ ಬಲಿಯಾಗೋ ಎಲಿಷಾ ಕಮಿಷನ್ ಪಡೆದುಕೊಳ್ಳುವ ಮೂಲಕ ರಾಜಕಾರಣಿಗಳೇ ತೋಡಿದ ಖೆಡ್ಡಾಕ್ಕೆ ಬಲಿಯಾಗಿದ್ದಾರೆನ್ನುವುದು ಸ್ಟಷ್ಟ ಎನ್ನೋದು ಅಧಿಕಾರಿಗಳ ಅಭಿಮತ.

ಹಾಗಾದ್ರೆ ಎಲಿಷಾ ಅಮಾನತಿನ ವಿಚಾರದಲ್ಲಿ ಹೀಗಾಗಿರಬಹುದಾ ಎನ್ನುವುದು ಅನೇಕರ ಊಹೆ.ಕಮಿಷನ್ ಕಳಂಕದಿಂದ ತೀವ್ರಮುಜುಗರಕ್ಕೆ ಸಿಲುಕಿದ ಸರ್ಕಾರಕ್ಕೆ ಹೈಕಮಾಂಡ್ ಕೂಡ ಲೆಫ್ಟ್ ರೈಟ್ ತೆಗೆದುಕೊಂಡಿತ್ತು.ಮೊನ್ನೆ ದೆಹಲಿಗೆ ಹೋದ ಬೊಮ್ಮಾಯಿ ಅವರನ್ನು ಕೂಡ ತರಾಟೆಗೆ ತೆಗೆದುಕೊಂಡಿತ್ತು.ಕಳಂಕದಿಂದ ಮುಕ್ತರಾಗಿ ಎಂದು ಗದರಿಸಿತ್ತು.ಇದೇ ಅವಕಾಶ ಕಾಯುತ್ತಿದ್ದ ಬಿಜೆಪಿ ಸರ್ಕಾರ ತನ್ನ ಮೇಲಿನ ಕಳಂಕವನ್ನು ತೊಡೆದುಕೊಳ್ಳಲು ಎಲಿಷಾ ಅವರನ್ನು ಅಮಾನತು ಮಾಡಿ ಹೈಕಮಾಂಡ್ ದೃಷ್ಟಿಯಲ್ಲಿ ಸಾಚಾ ಎಂದು ಸಾಬೀತು ಮಾಡಿಕೊಂಡಿರಬಹುದು..?!ರಾಜ್ಯದ ಜನರ ಮುಂದೆಯೂ ತಾವೆಷ್ಟು ಪ್ರಾಮಾಣಿಕರಾಗಿದ್ದೇವೆಂದು ಪ್ರೂವ್ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಎಲಿಷಾ ಅವರನ್ನು ಹರಕೆಯ ಕುರಿ ಮಾಡಿ ಬೊಮ್ಮಾಯಿ ಸರ್ಕಾರ ತನ್ನನ್ನು ಆರೋಪಮುಕ್ತ ಮಾಡಿಕೊಂಡಿದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ.

ಎಲಿಷಾ ಕಚೇರಿಯಲ್ಲಿ ದಂಡಿಯಾಗಿ ಕಡತಗಳಿರೋದು ಎಷ್ಟು ಸತ್ಯವೋ..ಅವನ್ನು ನಗರಾಭಿವೃದ್ಧಿ ಇಲಾಖೆಯ ಮೇಲಾಧಿಕಾರಿಗಳಿಗೆ ಕಳುಹಿಸಿದ್ರೂ ಅವನ್ನು ದೊಡ್ಡವರ ಆದೇಶದವರೆಗೂ ಕಚೇರಿಯಲ್ಲೇ ಇಟ್ಟುಕೊಳ್ಳುವಂತೆ ಅವರೇ  ಆದೇಶಿಸುತ್ತಿದ್ದಾರೆನ್ನುವುದು ಕೂಡ ಅಷ್ಟೇ ಸತ್ಯವಂತೆ ..ಅಲ್ಲದೇ ಹಾಗೆ ನಡೆಯೊಕ್ಕೆ ರಾಜಕಾರಣಿಗಳ ಪರ್ಸಂಟೇಜ್-ಕಮಿಷನ್ ದಂಧೆಯೂ ಕಾರಣ ಎನ್ನುವುದನ್ನು ಸರ್ಕಾರಗಳ ಮೇಲೆ ನಿರಂರತರವಾಗಿ ಕೇಳಿಬರುತ್ತಿರುವ ಆರೋಪಗಳ ಹಿನ್ನಲೆಯಲ್ಲಿ ಚೆನ್ನಾಗಿ ಅರ್ಥೈಸಿಕೊಳ್ಳಬಹುದೇನೋ..ಅದೇನೇ ಆಗಲಿ ಸರ್ಕಾರದ ಕೃಪಾಪೋಷಿತ ಸಸ್ಪೆಂಡ್ ಎನ್ನುವ ನಾಟಕದಲ್ಲಿ ಎಲಿಷಾ ಆಂಡ್ರ್ಯೂಸ್ ಬಲಿಪಶುವಾಗಿದ್ದಂತೂ ಸತ್ಯ ಎನ್ನುವುದು ಸರ್ಕಾರದ ಬಗ್ಗೆ ಕೇಳಿಬರುತ್ತಿರುವ ದಂಡಿ ಆರೋಪಗಳನ್ನು ಹತ್ತಿರದಿಂದ ಕಂಡವರ ವಿಶ್ಲೇಷಣೆ.

Spread the love
Leave A Reply

Your email address will not be published.

Flash News