
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ದಿನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಪ್ರೊ.ವೇಣುಗೋಪಾಲ್ ಅವರ ನೇಮಕಾತಿ ವಿಚಾರದಲ್ಲಿ ಸರ್ಕಾರ ಹಾಗೂ ಕೋರ್ಟ್ ಗಳ ಮಟ್ಟದಲ್ಲಿ ಸಂಘರ್ಷಕ್ಕಿಳಿದಿದ್ದ ಸಿಂಡಿಕೇಟ್ ಸದಸ್ಯರು ಇದೀಗ ಮತ್ತೊಂದು ಹಂತದ ಬಂಡಾಯ ಶುರುವಿಟ್ಟುಕೊಂಡಿದ್ದಾರೆ.ಅದೇ ಸಾಮೂಹಿಕ ರಾಜೀನಾಮೆ.
ಹೌದು…ರಾಜ್ಯ ಸರ್ಕಾರ ಬೆಂಗಳೂರು ವಿವಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ವಿಶ್ವವಿದ್ಯಾಲಯವನ್ನು ಹಾಳು ಮಾಡೊಕ್ಕೆ ಶಪಥ ತೊಟ್ಟಂತೆ ಕಾಣುತ್ತಿದೆ ಎನ್ನುವುದು ಬಹುತೇಕ ಸಿಂಡಿಕೇಟ್ ಸದಸ್ಯರ ಗಂಭೀರ ಆರೋಪ.ಇದಕ್ಕಾಗಿ ಸರ್ಕಾರದ ವಿರುದ್ದವೇ ತೊಡೆ ತಟ್ಟಿದ್ದು ಬಹುಷಃ ವಿಶ್ಚವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲೆನಿಸುತ್ತದೆ.
ಕುಲಪತಿಗಳ ವಿಚಾರದಲ್ಲಿ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸಿ ಹೋರಾಟಕ್ಕಿಳಿದಿದ್ದ ಸಿಂಡಿಕೇಟ್ ಸದಸ್ಯರು ಕೋರ್ಟ್ ಗಳ ಆದೇಶದ ಬಗ್ಗೆ ಗೌರವವಿದ್ದರೂ ಎಲ್ಲೋ ಒಂದೆಡೆ ಸರ್ಕಾರ ಕೋರ್ಟ್ ನ್ನು ಮಿಸ್ ಲೀಡ್ ಮಾಡುತ್ತಿದೆಯಾ ಎನ್ನುವ ಬೇಸರದಲ್ಲಿ ಮತ್ತೊಂದು ಸುತ್ತಿನ ಕಾನೂನಾತ್ಮಕ ಹೋರಾಟಕ್ಕೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದೆಲ್ಲದರ ಬೆನ್ನಲ್ಲೇ ಇದೀಗ ಸಿಂಡಿಕೇಟ್ ಸದಸ್ಯರು ವಿವಿಯಲ್ಲಿ ಕೆಲಸ ಮಾಡೊ ವಾತಾವರಣ ಇಲ್ಲ..ಸಿಂಡಿಕೇಟ್ ಸದಸ್ಯರನ್ನು ಕೇವಲ ದೃಷ್ಟಿ ಬೊಂಬೆಗಳಂತೆ ಪ್ರತಿಷ್ಟಾಪಿಸಲಾಗಿದೆ.ವಿವಿ ಕುಲಪತಿಗಳೆನ್ನುವವರು ಸಿಂಡಿಕೇಟ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಿಷ್ಟಕ್ಕೆ ಬಂದಂತೆ ಆಡಳಿತ ನಡೆಸುವಾಗ ನಮ್ಮ ಅವಶ್ಯಕತೆ ಏನಿದೆ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೆ ಸೀಮಿತವಾಗದೆ ಸಾಮೂಹಿಕ ರಾಜೀನಾಮೆ ನೀಡುವ ಮಾತನ್ನೇಳಿದ್ದಾರೆ.ಈ ಹಿನ್ನಲೆಯಲ್ಲಿ ಇಂದು ಸುದ್ದಿಗೋಷ್ಟಿ ಕೂಡ ಕರೆದಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ,ಆಡಳಿತದಲ್ಲಿನ ತಾತ್ಸಾರಕ್ಕೆ ಬೇಸತ್ತು ರಾಜೀನಾಮೆ ನೀಡಲು ಮುಂದಾ ಗಿದ್ದಾರೆನ್ನಲಾಗುತ್ತಿರುವ ಸಿಂಡಿಕೇಟ್ ಸದಸ್ಯರು ಇದೇ ವೇದಿಕೆಯಲ್ಲಿ ವಿವಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಬಯಲಿಗೆಳೆಯಲಿದ್ದಾರೆ ಎನ್ನಲಾಗ್ತಿದೆ.ಈ ಹಿನ್ನಲೆಯಲ್ಲಿ ಸಾಕಷ್ಟು ಸ್ಪೋಟಕ ದಾಖಲೆಗ ಳು ಇಂದು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆಯಂತೆ.
ಕುಲಪತಿಗಳಾದ ಪ್ರೊ.ವೇಣುಗೋಪಾಲ್ ಅವರೇ ಇಂದಿನ ಸಿಂಡಿಕೇಟ್ ಸದಸ್ಯರ ಟಾರ್ಗೆಟ್ ಎನ್ನಲಾಗುತ್ತಿದೆ.ವೇಣುಗೋಪಾಲ್ ಅವರು ಬೈಲಾ ಉಲ್ಲಂಘಿಸಿ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆನ್ನಲಾದ ನಿರ್ದಾರಗಳು,ಮಾಡಿಸಿರಬಹುದಾದ ಕಾಮಗಾರಿಗಳು,ಅದರಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕಿಕ್ ಬ್ಯಾಕ್ ವ್ಯವಹಾರ..ಇದರಿಂದ ವಿವಿಗೆ ಆಗಿರಬಹುದಾದ ಸಾಕಷ್ಟು ಕೋಟಿ ನಷ್ಟ. ಹಾಗೂ ಸರ್ಕಾರದ ಮಟ್ಟದಲ್ಲಿ ಸಹಕರಿಸಿರಬಹುದಾದಂಥವರ ಸಾಕಷ್ಟು ವಿವರಗಳನ್ನು ಪತ್ರಿಕಾಗೋಷ್ಟಿಯಲ್ಲಿ ಎಳೆಎಳೆಯಾಗಿ ಸಿಂಡಿಕೇಟ್ ಸದಸ್ಯರು ಬಿಡಿಸಿಡಬಹುದಾದ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಪ್ರೊ,.ವೇಣುಗೋಪಾಲ್ ಅವರ ವಿಚಾರದಲ್ಲಿ ತಮ್ಮನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸಿದ್ದರ ಪರಿಣಾಮವೇ ಇವತ್ತು ಬಂಡಾಯ ಏಳಬೇಕಾಗುತ್ತಿದೆ. ವೇಣುಗೋಪಾಲ್ ಅವರಿಗೆ ಸಹಾಯ ಮಾಡಲಿಕ್ಕಾಗಿ,ಅವರ ಬೆನ್ನಿಗೆ ನಿಲ್ಲಲಿಕ್ಕಾಗಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷ್ಯಿಸಲಾಗಿದೆ ಎಂದಿರುವ ಸಿಂಡಿಕೇಟ್ ಸದಸ್ಯರು ಸರ್ಕಾರದ ಧೋರಣೆಗೆ ಬೇಸತ್ತು ರಾಜೀನಾಮೆ ಕೊಡಲಿದ್ದಾರೆ ಎನ್ನಲಾಗುತ್ತಿದೆ.ಸರ್ಕಾರ ಕೂಡ ಪ್ರೊ;.ವೇಣುಗೋಪಾಲ್ ಅವರಿಗಾಗಿ ಸಿಂಡಿಕೇಟ್ ಸದಸ್ಯರನ್ನು ನಿರ್ಲಕ್ಷ್ಯಸಿದೆ ಎನ್ನುವುದು ಕೂಡ ಸತ್ಯ ಎನ್ನುವ ಮಾತುಗಳಿವೆ.ಹಾಗಾಗಿ ಇಂದಿನ ಸುದ್ದಿಗೋಷ್ಟಿಯಲ್ಲಿ ಸಿಂಡಿಕೇಟ್ ಸದಸ್ಯರು ಯಾರ ವಿರುದ್ಧ ಬಾಂಬ್ ಸಿಡಿಸುತ್ತಾರೋ..ಯಾರ ಹಗರಣಗಳನ್ನು ಬಯಲಿಗೆಳೆಯುತ್ತಾರೋ ಕಾದು ನೋಡಬೇಕಿದೆ.