IS IT FAILURE OF POLICE INTELIGENCE..?! ಸಂತೋಷ್ ಪಾಟೀಲ್ ಆತ್ಮಹತ್ಯೆ..?! ಪೊಲೀಸ್ ಗುಪ್ತಚರ ವಿಫಲ..?!

ಸಂತೋಷ್ ಪಾಟೀಲ್ ಆತ್ಮಹತ್ಯೆ ತಡೆಯಬಹುದಿತ್ತಾ ..?! ಇಂಟಲೆಜೆನ್ಸ್ ರಿಪೋರ್ಟ್ ಬಗ್ಗೆ ಗುಮಾನಿ..?!

0

ಬೆಂಗಳೂರು/ಉಡುಪಿ/ಬೆಳಗಾಂ: ಕಾಂಟ್ರ್ಯಾಕ್ಟರ್ ಸಂತೋಷ್ ಪಾಟೀಲ್ ಆತ್ಮಹತ್ಯೆಯನ್ನು ಪೊಲೀಸ್ ಗುಪ್ತಚರ ಇಲಾಖೆ ತಡೆಯಬಹುದಿತ್ತಾ..? ಸರಿಯಾಗಿ ನೆಟ್ ವರ್ಕ್ ನಲ್ಲಿ ಕೆಲಸ ಮಾಡಿದಿದ್ದರೆ ಅನಾಹುತವನ್ನು ತಪ್ಪಿಸಬಹುದಿತ್ತಾ ಆ ಮೂಲಕ ಸರ್ಕಾರಕ್ಕೆ ಆದ ಮುಜುಗರ ಹಾಗೂ ತನಗಾದ ಅವಮಾನದಿಂದ ತಪ್ಪಿಸಿಕೊಳ್ಳಬಹುದಿತ್ತಾ..? ಇಂತದೊಂದಿಷ್ಟು ಪ್ರಶ್ನೆಗಳು ಗುಪ್ತಚರ ಇಲಾಖೆಯ ಕಾರ್ಯವೈಖರಿ ಬೆನ್ನಲ್ಲಿ ಕೇಳಿಬರಲಾರಂಭಿಸಿವೆ..ಅವುಗಳ ಮೇಲೊಂದು ಗ್ಲ್ಯಾನ್ಸ್ ಇಲ್ಲಿದೆ .

1-ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಪೊಲೀಸ್ ಇಂಟಲಿಜೆನ್ಸ್ ಕೊಟ್ಟ ರಿಪೋರ್ಟ್ ಕೂಡ ಸಾಕಷ್ಟು ಗುಮಾನಿ ಮೂಡಿಸುತ್ತದೆ.ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಟೂಲ್ ಕಿಟ್ ಹುನ್ನಾರ ಇದೆ. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಶಾಶಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೈವಾಡ ಇದೆ ಎನ್ನುವ ಶಂಕೆ ವ್ಯಕ್ತಪಡಿಸಿತ್ತು.

2-ಇಷ್ಟೆಲ್ಲಾ ಕರಾರುವಕ್ಕಾದ ವರದಿ ನೀಡಿರುವ ಇಂಟಲಿಜೆನ್ಸ್ ಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ ಮುಂಚೆಯೇ ಏಕೆ ತಿಳಿಯಲಿಲ್ಲ..ಆತ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾನೆನ್ನುವ ಶಂಕೆಯನ್ನೇಕೆ ಸರ್ಕಾರದ ಮುಂದೆ ವ್ಯಕ್ತಪಡಿಸಲಿಲ್ಲ.

3-ಹೋಗ್ಲಿ ಆತ್ಮಹತ್ಯೆ ಮಾಡಿಕೊಳ್ಳೋರು ಡಂಗುರ ಸಾರಿಸಿ ಆತ್ಮಹತ್ಯೆ ಮಾಡಿಕೊಳ್ಳೋದಿಲ್ಲ ಎಂದೇಇಟ್ಟುಕೊಳ್ಳೋಣ,ಆದರೆ ಸಂತೋಷ್ ಪಾಟೀಲ್  ಕಾಣೆಯಾದ ದೂರನ್ನು ಆಧರಿಸಿ ತತ್ ಕ್ಷಣಕ್ಕೇಕೆ ಆತನನ್ನು ಪತ್ತೆ ಮಾಡಲಿಲ್ಲ.ಆತ ಉಡುಪಿಯಲ್ಲಿ ಇರೋದನ್ನು ಮೊಬೈಲ್ ಟವರ್ ಲೊಕೇಶನ್ ಮೂಲಕ ಪತ್ತೆ ಮಾಡಬಹದಿತ್ತಲ್ಲ..ಆತನ ಬಗ್ಗೆ ಗುಮಾನಿಯಿಂದಲಾದರೂ ದೃಷ್ಟಿ ನೆಡಬಹುದಿತ್ತಲ್ಲ.. ಆತನ ಮೇಲೆ ಆಗಲೇ ಕಣ್ಣು ಏಕೆ ಇಡಲಿಲ್ಲ..?ಲಾಡ್ಜ್ ಹುಡುಕಿಕೊಂಡು  ಹೋದಾಗಲೂ ಆತನನ್ನು ಪತ್ತೆ ಮಾಡಲು ಏಕೆ ಸಾಧ್ಯವಾಗಲಿಲ್ಲ..?

4-ಸಂತೋಷ್ ಪಾಟೀಲ್ ಉಳಿದುಕೊಂಡಿದ್ದ ಉಡುಪಿ ಹೇಳಿ ಕೇಳಿ ಮೊದಲೇ ಸೂಕ್ಷ್ಮ ಪ್ರದೇಶ.. ಹಿಜಾಬ್ ನ ವಿವಾದ ಸೃಷ್ಟಿಯಾ ಗಿದ್ದೇ ಇಲ್ಲಿ..ಅಂದಿನಿಂದಲೂ ಅದು ಸೆಂಟರ್ ಆಫ್ ಕಾಂಟ್ರವರ್ಸಿಯಾಗಿದೆ.ಅಂಥಾ ಪ್ರದೇಶದಲ್ಲೇ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಉಳಿದುಕೊಂಡಿದ್ದರು. ಸಂತೋಷ್ ಪಾಟೀಲ್ ಅಲ್ಲಿದ್ದಾನೆ ಎನ್ನುವ ಸುಳಿವು ಇದ್ದಾಗ್ಯೂ ಅದನ್ನು ಗಂಭೀರವಾಗಿ ಪರಿಗಣಿಸಿ ಆತನನ್ನು ಪತ್ತೆ ಮಾಡಬಹುದಿತ್ತಲ್ಲವೇ..?

ಏನಾದ್ರೊಂದು ಅವಘಡ ಸಂಭವಿಸಬಹುದೆನ್ನುವ ಆತಂಕ ವನ್ನು ಮೊದಲೇ ಮನಗಾಣಬದುತ್ತಿಲ್ಲಾ..? ಸಿಎಂ ಹಾಗು ಮಾಜಿ ಸಿಎಂಗಳು ಇದ್ದ ವೇಳೆಯೇ ಏನಾದರೊಂದು ಅವಘಡವಾದ್ರೆ ಅದು ಸರ್ಕಾರಕ್ಕೆ ಮುಜುಗರ ತರಿಸಬಹುದಲ್ವಾ,.? ಎಲ್ಲಕ್ಕಿಂತ ಹೆಚ್ಚಾಗಿ ಅದು ಇಂಟಲಿಜೆನ್ಸ್ ಫೇಲ್ಯೂರ್ ಆಗಬಹುದೆನ್ನುವ ಸೂಕ್ಷ್ಮವೂ ಗೊತ್ತಾಗದೆ ಹೋದದ್ದು  ದುರಂತ ಅಲ್ವೇ..?

Spread the love
Leave A Reply

Your email address will not be published.

Flash News